Featured
ಕೊರೊನಾಗೆ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಲಿ – ಹಿರಿಯ ಕಲಾವಿದ ಗಂಗಾಧರಯ್ಯ ಕೊನೆಯುಸಿರು..!
![](https://risingkannada.com/wp-content/uploads/2020/07/WhatsApp-Image-2020-07-18-at-10.43.18-AM.jpeg)
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಮಹಾಮಾರಿ ಕೊರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ಇದೀಗ ಈ ಸೋಂಕು ತನ್ನ ಕದಂಬ ಬಾಹುಗಳನ್ನ ಸ್ಯಾಂಡಲ್‌ವುಡ್‌ಗೂ ಚಾಚಿದ್ದು, ಮೊದಲ ಬಲಿ ಪಡೆದಿದೆ.
ಪ್ರತೀ ಹಂತದಲ್ಲೂ ಹೆಚ್ಚಾಗಿಯೇ ಮರಣ ಮೃದಂಗ ಬಾರಿಸುತ್ತಿರೋ ಈ ಕೋವಿಡ್-19 ಸ್ಯಾಂಡಲ್‌ವುಡ್‌ಗೆ ಶಾಕ್ ಕೊಟ್ಟಿದೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಹುಲಿವಾನ್ ಗಂಗಾಧರಯ್ಯ, ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾ ಪಾಸಿಟಿವ್‌ನಿಂದಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಹಿರಿಯ ಕಲಾವಿದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿತ್ತೆಂದು ತಿಳಿದುಬಂದಿದೆ.
ಘಟನೆ ಬಗ್ಗೆ ಅವರ ಪುತ್ರಿ ರೇವತಿ ಮಾತನಾಡಿದ್ದು, ಹುಲಿವಾನ್ ಗಂಗಾಧರಯ್ಯನವರು ಕುಣಿಗಲ್ ತಾಲೂಕು ಹುಲಿವಾನದಲ್ಲೇ ಇದ್ದರು. ಆದ್ರೆ, ಜ್ವರ ಶುರುವಾದಗಾಲೇ ಬೆಳ್ಳೂರು ಕ್ರಾಸ್ ಬಳಿ ಟೆಸ್ಟ್ ಮಾಡಿಸಲಾಗಿತ್ತು. ಆದ್ರೆ ಇದುವರೆಗೂ ಯಾವುದೇ ರಿಪೋರ್ಟ್ ಬಂದಿಲ್ಲ. ಜ್ವರದ ಗುಣಲಕ್ಷಣ ಕಾಣಿಸಿದೊಡನೆ ಫಾರ್ಮ್ ಹೌಸ್‌ಗೆ ಶಿಫ್ಟಾಗಿದ್ದರು. ಆದ್ರೆ ಜ್ವರ ಗುಣಮುಕವಾಗದ ಕಾರಣ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?