Connect with us

Featured

ಸದ್ಗುರುಗಳ ಸ್ವಾತಂತ್ರ್ಯ ದಿನದ ಸಂದೇಶ: “ಅಭಿವೃದ್ಧಿ ಮತ್ತು ಯೋಗಕ್ಷೇಮದ ಕಡೆಗೆ ಶಕ್ತಿಮೀರಿ ಮುನ್ನುಗ್ಗುವ ಸಮಯವಿದು”

ರೈಸಿಂಗ್​ ಕನ್ನಡ ನ್ಯೂಸ್​ ಡೆಸ್ಕ್​:

“ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಸಾಧ್ಯತೆಯನ್ನು ಒದಗಿಸುವ ಹಾಗೂ ದೇಶದಲ್ಲಿ ಅವರ ಜೀವನಕ್ಕೆ ಪೂರ್ಣ ಅಭಿವ್ಯಕ್ತಿ ಕಂಡುಕೊಳ್ಳುವ ಸಾಧ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ನಾವು ರಾಷ್ಟ್ರವನ್ನು ಕರೆದೊಯ್ಯಬೇಕು. ಭವ್ಯ ಭಾರತದ ನಿರ್ಮಾಣದಲ್ಲಿ, ಪ್ರತಿಯೊಬ್ಬರಿಗೂ ತನ್ನದೇ ಅದ ಒಂದು ಪಾತ್ರವಿದೆ, ವಿಶೇಷವಾಗಿ ಈ ರಾಷ್ಟ್ರದ ಯುವಕರಿಗೆ – ನೀವು ಎದ್ದುನಿಂತು ಸರಿಯಾದ ಕೆಲಸಗಳನ್ನು ಮಾಡಬೇಕೆಂದು ನಾನು ನಿಮ್ಮನ್ನು ಕೋರುತ್ತೇನೆ” ಎಂದು ಈಶಾ ಫೌಂಡೇಶನ್‌ನ ಸ್ಥಾಪಕರಾದ ಸದ್ಗುರುಗಳು ಹೇಳಿದರು. ನಮ್ಮ ವೈವಿಧ್ಯತೆಗಳನ್ನು ಆಚರಿಸುವ ಜೊತೆಗೆ ಭಾರತದ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ದಿನದ ವಿಡಿಯೋದಲ್ಲಿ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದರು. “ನಾವು ಈ ರಾಷ್ಟ್ರವನ್ನು ಏಕತೆಯ ಆಧಾರದ ಮೇಲೆ ರಚನೆ ಮಾಡಿಲ್ಲ, ಬದಲಾಗಿ ನಮ್ಮದೇ ಆದ ವಿವಿಧ ಜೀವನಶೈಲಿಯ ಆಧಾರದ ಮೇಲೆ ರಚಿಸಿದ್ದೇವೆ. ಎಲ್ಲ ರೀತಿಯಲ್ಲೂ, ನಾವು ಅತ್ಯಂತ ವರ್ಣರಂಜಿತ ರಾಷ್ಟ್ರವಾಗಿದ್ದೇವೆ. ಈ ರೀತಿಯ ಜೀವನಶೈಲಿಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ,” ಎಂದು ಅವರು ಪ್ರತಿಪಾದಿಸಿದರು.

Advertisement

ಸಾಂಕ್ರಾಮಿಕ ಪಿಡುಗಿನ ನಂತರದ ದಿನಗಳಲ್ಲಿ, ಭಾರತಕ್ಕೆ  ದೊರೆತಿರುವ ಅವಕಾಶಗಳ ಬಗ್ಗೆ ಮಾತನಾಡುತ್ತಾ ಅವರು, ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು, ಅಭಿವೃದ್ಧಿಯಿಂದ ಕನಿಷ್ಠ 25 ವರ್ಷ ಹಿಂದೆ ಉಳಿದಿದೆ ಹಾಗು ಈಗ ಆ  ನ್ಯೂನತೆಗಳನ್ನು ಸರಿದೂಗಿಸುವ ಉತ್ತಮವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಆದಾಗ್ಯೂ, ಹಿಂದಿನ ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಈ ಸಮಯದ “ಪ್ರಚಂಡ ಸಾಧ್ಯತೆಯ” ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದು ಅವರು ಜನರನ್ನು ಕೇಳಿಕೊಂಡರು.

ನಮ್ಮ ದೇಶದಲ್ಲಿರುವ ಚಾಣಾಕ್ಷತೆ, ಜ್ಞಾನ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಶಕ್ತಿಯ ಹೊರತೂ ಬೇರೆ ಬೇರೆ ದೇಶಗಳಲ್ಲಿ ನಾವು ಛಾಪು ಮೂಡಿಸಲು ಸಾಧ್ಯವಾಗಿಲ್ಲ. ಇದು ಅಭಿವೃದ್ಧಿ ಮತ್ತು ಯೋಗಕ್ಷೇಮದ ಕಡೆಗೆ ನಮ್ಮ ಶಕ್ತಿಮೀರಿ ಮುನ್ನುಗ್ಗುವ ನಿಟ್ಟಿನಲ್ಲಿ ಸರಿಯಾದ ಸಮಯ ಎಂದು ಅವರು ಒತ್ತಿ ಹೇಳಿದರು.

ತಾವು ಬಹಳ ಜನಪ್ರಿಯತೆ ಹೊಂದಿರುವ ಭಾರತೀಯ ಯುವಜನತೆಗೆ ವಿಶೇಷ ಸಂದೇಶವನ್ನು ನೀಡುತ್ತಾ ಸದ್ಗುರುಗಳು ಅವರನ್ನು ಉದ್ದೇಶಿಸಿ, “ಈ ರಾಷ್ಟ್ರದ ಭವಿಷ್ಯವು ಅಡಕವಾಗಿರುವುದು –  ನಿಮ್ಮ ಕೌಶಲ್ಯಗಳ ಮೇಲೆ, ನಿಮ್ಮ ಸಾಮರ್ಥ್ಯದ ಮೇಲೆ, ನಿಮ್ಮ  ಛಲದ ಮೇಲೆ ಮತ್ತು ಈ ದೇಶದಲ್ಲಿ ಪ್ರೇರಿತ ರೀತಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಮೇಲೆ  ಎಂದು ನೀವು ಅರ್ಥಮಾಡಿಕೊಳ್ಳಬೇಕು” ಎಂದು ತಿಳಿ ಹೇಳಿದರು.

ಹೆಚ್ಚುತ್ತಿರುವ ಸಾಂಕ್ರಾಮಿಕ ಪಿಡುಗಿನ ನಡುವೆ ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನವನ್ನು ತಗ್ಗಿದ ಪ್ರಮಾಣದಲ್ಲಿ ಆಚರಿಸುತ್ತಿದೆ. ಈ ಬಾರಿ  ಕೆಂಪು ಕೋಟೆಯಲ್ಲಿನ ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿ ಸಾಕ್ಷಿಯಾಗುವ ಕಾಲು ಭಾಗದಷ್ಟು ಜನರಿಗೆ ಮಾತ್ರ ತೆರೆದಿರುತ್ತವೆ. ಶಾಲೆಗಳು ಸಹ ಈ ಸಂದರ್ಭದಲ್ಲಿ ಆಚರಿಸುವಂತಿಲ್ಲ. ಸ್ವಾತಂತ್ರ್ಯ ದಿನವನ್ನು ಮನೆಯಲ್ಲಿಯೇ ಆಚರಿಸುವಂತೆ ಹಾಗು ದೊಡ್ಡ ಕೂಟಗಳನ್ನು ಸೇರದಿರುವಂತೆ ಸರ್ಕಾರವು ಜನರಿಗೆ ವಿನಂತಿಸಿದೆ.

Advertisement

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ