Featured
“ಪೈಲೆಟ್” ಪ್ರಾಜೆಕ್ಟ್ ಸಕ್ಸಸ್ - BJP ಜೊತೆ ನಡೆಯಲು ಸಚಿನ್ ಪ್ಲಾನ್..!
![](https://risingkannada.com/wp-content/uploads/2020/07/congress-high-command.jpeg)
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ರಾಜಸ್ಥಾನದಲ್ಲಿ ರಾಜಕೀಯ ಹಗ್ಗಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಭುಗಿಲೆದ್ದಿರುವ ಭಿನ್ನಭಿಪ್ರಾಯವನ್ನ ಸರಿಪಡಿಸಲು ಮುಂದಾಗಿದ್ದು ಡಿಸಿಎಮ್ ಸಚಿನ್ ಪೈಲೆಟ್ ಅವರನ್ನ ಮಾತುಕತೆಗೆ ಆಹ್ವಾನಿಸಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಡಿಸಿಎಂ ಸಚಿನ್ ಪೈಲೆಟ್ ನಡುವಿನ ಒಳಜಗಳ ಬೀಗಿದೆ ಬಂದು ಅಲ್ಲೋಲ್ಲ ಕಲ್ಲೋಲ ಸೃಷ್ಟಿಸಿದೆ. ಇದರ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸಿದರೆ ಕಾಂಗ್ರೆಸ್ ರಾಜಸ್ಥಾನ ಉಳಿಸಿಕೊಳ್ಳಲು ಹರಸಹಾಸ ಪಡೆಯುತ್ತಿದೆ.
![](https://risingkannada.com/wp-content/uploads/2020/07/sachinpilot.jpeg)
ಡಿಸಿಎಂ ಸಚಿನ್ ಪೈಲೆಟ್ ತಮ್ಮ ಮುಂದಿನ ರಾಜಕೀಯ ಜೀವನವನ್ನ ನಿರ್ಧರಿಸಲು ದೆಹಲಿಗೆ ಆಗಮಿಸಿದ್ದಾರೆ. ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ಸರ್ಕಾರವನ್ನ ಉಳಿಸಿಕೊಳ್ಳಲು ತಮ್ಮ ಬೆಂಬಲಿಗರ ಶಾಸಕರೊಂದಿಗೆ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.
ಇದೀಗ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಹೈಕಮಾಂಡ್ ಸಚಿನ್ ಪೈಲೆಟ್ಗೆ ಬಂದು ಮಾತುಕತೆ ನಡೆಸಲು ಬಾಗಿಲು ತೆಗೆದಿರುವುದಾಗಿ ಹೇಳಿದೆ.
ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಇತರೆ ಕೈ ನಾಯಕರು ಸಚಿನ್ ಪೈಲೆಟ್ ಅವರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ನಾಯಕರುಗಳ ವೈಯಕ್ತಿಕ ಆಸೆಗಳಿಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಎಚ್ಚರಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?