ಕ್ರೀಡೆ
ಹಿಮಾಚ್ಛಾದಿತ ಪಹಲ್ಗಾಂವ್ನಲ್ಲಿ ಸಚಿನ್ : ಫೋಟೋ ಫುಲ್ ವೈರಲ್..!

ಭಾರತವೇ ಏಕೆ ಇಡೀ ಜಗತ್ತು ಕೊಂಡಾಡುವ ವಿಶ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕಾಶ್ಮೀರದ ಪಹಲ್ಗಾಂವ್ ಪ್ರವಾಸದಲ್ಲಿದ್ದಾರೆ. ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜೊತೆ ಪಹಲ್ಗಾಂವ್ನಲ್ಲಿ ಬೀಳುತ್ತಿರುವ ಹಿಮವನ್ನ ಆಸ್ವಾದಿಸುವ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗಿವೆ. ಇದಕ್ಕೂ ಮುನ್ನ ಗುಲ್ ಮಾರ್ಗ್ ನಲ್ಲಿ ಸ್ಥಳೀಯರ ಜೊತೆ ಸಚಿನ್ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ‘ಹಮಾರಾ ಪೆಹ್ಲಾ ಸ್ನೋ ಫಾಲ್ ಇನ್ ಪಹಲ್ಗಾಂವ್’ ಎಂದು ಸಚಿನ್ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಮೇಕೆಯೊಂದರ ಜೊತೆ ಸಚಿನ್ ತೆಂಡೂಲ್ಕರ್ ಇರುವ ಫೋಟೋ ಕೂಡ ಇದೆ.
ಈ ಪೋಸ್ಟ್ಗೆ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೆಲ್ಲಾ ಒಂದೇ ಚಿತ್ರದಲ್ಲಿ ಎರಡು GOATಗಳನ್ನು ನೋಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಮೇಕೆಗೆ ಇಂಗ್ಲೀಷ್ನಲ್ಲಿ ಗೋಟ್ ಎಂದು ಕರೆಯಲಾಗುತ್ತದೆ. ಆದರೆ, ಇದನ್ನು ನಾನಾ ವಲಯಗಳಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಾಧನೆಯನ್ನು ಮಾಡಿರುವವರನ್ನು ಗುರುತಿಸಲು ಸಹ ಬಳಸಲಾಗುತ್ತದೆ. ಗ್ರೇಟೆ ಸ್ಟ್ ಆಫ್ ಆಲ್ ಟೈಂ ಎಂದರೆ ಜಗತ್ತು ಇದುವರೆಗೆ ಕಂಡವರಲ್ಲಿಯೇ ಶ್ರೇಷ್ಠರು ಎಂಬುದನ್ನು ಸರಳವಾಗಿ ಗೋಟ್ ಎಂದು ಕರೆಯುತ್ತಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?