ಟ್ರೆಂಡಿಂಗ್
ಚಂದ್ರನಲ್ಲಿ ಅಣು ಸ್ಥಾವರ ಸ್ಥಾಪನೆಗೆ ರಷ್ಯಾ-ಚೀನಾ ಚಿಂತನೆ..! ಯಾಕೆ ಗೊತ್ತಾ..?

ರಷ್ಯಾ ಮತ್ತು ಚೀನಾ ಜಂಟಿಯಾಗಿ ಚಂದ್ರನಲ್ಲಿ ಅಣು ಸ್ಥಾವರ ಸ್ಥಾಪನೆಗೆ ಮುಂದಾಗಿವೆ. ಇತ್ತೀಚಿಗೆ ಹಲವಾರು ದೇಶಗಳು ಚಂದ್ರನಲ್ಲಿ ಸಂಶೋಧನೆಗೆ ಭಾರಿ ಆಸಕ್ತಿ ತೋರಿಸುತ್ತಿವೆ. ಅದರಲ್ಲೂ ಭಾರತದ ವಿಕ್ರಮ್ ಬಾಹ್ಯಾಕಾಶ ವಾಹನ ಮತ್ತು ರೋವರ್ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಬಳಿಕ ಚಂದ್ರನ ಕುರಿತು ಸಂಶೋಧನೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿ ಸಂಶೋಧನೆ ನಡೆಸಲು ಅನುಕೂಲವಾಗಲು ಅಣು ಶಕ್ತಿ ಸ್ಥಾವರವನ್ನು ಸ್ಥಾಪಿಸಿ, ಚಂದ್ರನಲ್ಲಿ ಇಳಿಯುವ ಬಾಹ್ಯಾಕಾಶ ವಾಹನಗಳಿಗೆ ಇಂಧನ ಪೂರೈಸಲು ರಷ್ಯಾ ಮತ್ತು ಚೀನಾ ಈ ಯೋಜನೆ ರೂಪಿಸಿವೆ.

ಇದರಿಂದಾಗಿ ಚಂದ್ರನಲ್ಲಿ ಸಂಶೋಧನೆ ನಡೆಸಲು ಹೆಚ್ಚಿನ ಅನುಕೂಲವಾಗುವ ಜೊತೆಗೆ ಮನುಷ್ಯರು ಚಂದ್ರನಲ್ಲಿ ಇಳಿದ ಬಳಿಕ ಇಂಧನ ಕೊರತೆಯಾಗದಂತೆ ತಡೆಯುವುದು ಇದರ ಉದ್ದೇಶವಾಗಿದೆ. 2035ರ ವೇಳೆಗೆ ಚಂದ್ರನಲ್ಲಿ ಅಣು ಸ್ಥಾವರ ಸ್ಥಾಪಿಸಲು ಎರಡು ದೇಶಗಳು ಯೋಜನೆ ಹಾಕಿಕೊಂಡಿವೆ. ಅಮೆರಿಕದ ನಾಸಾ ಕೂಡ ಇದೇ ರೀತಿಯ ಸ್ಥಾವರ ಸ್ಥಾಪಿಸಲು 2021ರಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಈಗಾಗಲೇ 3 ಖಾಸಗಿ ಕಂಪನಿಗಳು ನಾಸಾದಿಂದ ಗುತ್ತಿಗೆ ಪಡೆದು ಯೋಜನೆಯ ರೂಪುರೇಷೆಯನ್ನು ತಯಾರಿಸುತ್ತಿವೆ. 2030ರ ವೇಳೆಗೆ ಚಂದ್ರನಲ್ಲಿ ಅಮೆರಿಕದ ಅಣು ಸ್ಥಾವರ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?