Featured
ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್ ಸಿಕ್ಸ್ ಪ್ಯಾಕ್
ರೈಸಿಂಗ್ ಕನ್ನಡ :- ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್, ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಲಿದ್ದಾರಂತೆ. ಇದಕ್ಕಾಗಿ ಕಳೆದ ಎಂಟು ತಿಂಗಳಿಂದ ವರ್ಕೌಟ್ ಮಾಡುತ್ತಿದ್ದಾರೆ ಯಶ್.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’. ಈ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಈ ಚಿತ್ರದ ಕುರಿತಾಗಿ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರದಲ್ಲಿ ಯಶ್ ಅವರು ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಲಿದ್ದಾರೆ. ಇದಕ್ಕಾಗಿ ಯಶ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರಂತೆ.
ಚಿತ್ರದಲ್ಲಿ ಎಪ್ಪತ್ತರ ದಶಕದ ದೃಶ್ಯವೊಂದು ಇದ್ದು, ಫ್ಲಾಶ್‌ಬ್ಯಾಕ್‌ನಲ್ಲಿ ಬರುವ ಆ ದೃಶ್ಯಕ್ಕಾಗಿ ಕಳೆದ ಎಂಟು ತಿಂಗಳಿಂದ ಯಶ್ ವರ್ಕೌಟ್ ಮಾಡುತ್ತಿರುವುದಾಗಿ ಸ್ವತಃ ಹೇಳಿದ್ದಾರೆ ಯಶ್. ಹಾಗಾಗಿ ಈ ಸುದ್ದಿಗೆ ಇನ್ನಷ್ಟು ಮಹತ್ವ ಬಂದಿದೆ.
ಬಹುಶಃ ಇದೇ ವರ್ಷ ಡಿಸೆಂಬರ್ ಕೊನೆಗೆ ಅಥವಾ 2021ರ ಜನವರಿಗೆ ಸಿನಿಮಾ ತೆರೆಕಾಣುವ ಸಾಧ್ಯತೆಗಳಿವೆ. ಕೆಜಿಎಫ್ 2ರಲ್ಲಿ ಮೊದಲ ಭಾಗಕ್ಕಿಂತಲೂ ಭೀಕರವಾದ ಹೋರಾಟ ಸನ್ನಿವೇಶಗಳು ಇವೆಯಂತೆ. ಸೆಪ್ಟೆಂಬರ್ ವೇಳೆಗೆ ಕೆಜಿಎಫ್ ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದೆ.
ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್ ಸೇರಿದಂತೆ ಚಾಪ್ಟರ್ 1ರಲ್ಲಿರುವ ಬಹುತೇಕ ಕಲಾವಿದರೂ ಇರಲಿದ್ದಾರೆ. ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಸುಮಾರು ₹ 80 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಅಂದಾಜು ₹ 250 ಕೋಟಿ ಗಳಿಕೆ ಮಾಡಿ ಸ್ಯಾಂಡಲ್‍ವುಡ್ ಇತಿಹಾಸಲ್ಲಿ ಹೊಸ ದಾಖಲೆ ಬರೆದಿದೆ.
ಕೆಜಿಎಫ್ 2 ಸಿನಿಮಾದ ಬಜೆಟ್ 100 ಕೋಟಿ ದಾಟಿದೆ.. ಕೆಜಿಎಫ್ 2 ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ..? ಅನ್ನೋ ಕುತೂಹಲ ಕನ್ನಡ ಸೇರಿದಂತೆ ಭಾರತೀಯ ಸಿನಿಮಾ ರಂಗವೇ ಕಾಯ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?