Featured
ಕಣ್ಣೀರಿಗೆ ಕಾರಣವಾದ ಕೃಷ್ಣಾ ನದಿ- ಸೇತುವೆಗಳು ಜಲಾವೃತ- ಹೆದ್ದಾರಿ ಸಂಪರ್ಕ ಕಟ್- ಹೊಲಗದ್ದೆಗಳಿಗೆ ನುಗ್ಗಿದ ನೀರು
![](https://risingkannada.com/wp-content/uploads/2020/08/CKD1.jpg)
ರೈಸಿಂಗ್ ಕನ್ನಡ:
ರವೀಂದ್ರ ಚೌಗುಲೆ, ಚಿಕ್ಕೋಡಿ
ಮಹಾರಾಷ್ಟ್ರದಲ್ಲಿ ಮಳೆರಾಯನ ಅರ್ಭಟ ಮುಂದುವರೆದಿದೆ. ಹೀಗಾಘಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಪುರ ಭಾಗದಲ್ಲಿ ಹಲವು ನದಿಗಳು ಉಕ್ಕಿಹರಿಯುತ್ತಿವೆ, ಕೃಷ್ಣಾ, ವೇದಗಂಗಾ, ಧೂದ್ ಗಂಗಾ ನದಿಗಳಿಂದ ಪ್ರವಾಹ ಸೃಷ್ಟಿಯಾಗುತ್ತಿವೆ. ಕೋಯ್ನಾ ಜಲಾಶಯ ಭರ್ತಿಯಾಗಿದ್ದು, ಒಳಹರಿವಿನ ಪ್ರಮಾಣ ತೀವ್ರ ಏರಿಕೆಯಾಗಿರುವುದರಿಂದ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಚಿಕ್ಕೋಡಿಯ ಹಲವು ಭಾಗಗಳು ಜಲಾವೃತವಾಗಿವೆ.
ಕರ್ನಾಟಕ-ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಕುಡಚಿ-ಉಗಾರ ಸೇತುವೆ ಮುಳುಗಡೆಯಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಟ್ ಹಾಕಿದೆ. ನಿನ್ನೆ ಸಂಜೆ ವೇಳೆಗೆ ತೆರೆದಿದ್ದ ಸೇತುವೆ ಮೇಲೆ ಈಗ ೭ ರಿಂದ ೮ ಅಡಿ ಎತ್ತರಕ್ಕೆ ನೀರು ನಿಂತಿದೆ. ಕುಡಚಿಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಗುರುವಾರಕ್ಕಿಂತಲೂ ಇಂದು ನೀರಿನ ರಭಸ ಹೆಚ್ಚಿದೆ.
ಕೃಷ್ಣಾನದಿಗೆ ಅಡ್ಡಲಾಗಿರುವ ೮ ಸೇತುವೆಗಳು ಜಲಾವೃತಗೊಂಡಿದೆ. ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಚಿಕ್ಕೋಡಿ ಭಾಗದಲ್ಲಿ ಕೃಷ್ಣಾ ನದಿಯಿಂದ ಸಾಕಷ್ಟು ಹಾನಿಯಾಗುತ್ತಿದೆ.
You may like
ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ ಲಕ್ಷ್ಮಣ ಸವದಿ
ಕಾರ್ ಮೇಲೆ ಮಿಡಿಯಾ ಬರೆಸಿಕೊಂಡು ಸ್ಮಗ್ಲಿಂಗ್ ಮಾಡುತ್ತಿರುವಂತಹ ಘಟನೆ
ಕೊನೆಯ ದಿನವೂ ತರಾತುರಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಸಂಸದ ಅಣ್ಣಾಸಾಹೇಬ ಜೋಲ್ಲೆ
ಆಸ್ಪತ್ರೆಗೆ ದಾಖಲಾದ ಮಂಗ: ಮಾನವೀಯತೆ ಮೆರೆದ ಮಾನವ
ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ : ಅಮಿತ ಶಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ
ವಿಶ್ವದಾದ್ಯಂತ ಉಂಟಾದ ಅಂತರ್ಜಾಲ ಸಮಸ್ಯೆಗೇನು ಕಾರಣ ಗೊತ್ತಾ?