Uncategorized
ರಾಜಧಾನಿಯಲ್ಲಿ ಲಾಕ್ಡೌನ್ “ಅಮಲು”- ಕೊರೊನಾ “ಕಿಕ್”ಗೆ ಸಿದ್ಧವಾಗುತ್ತಿದ್ದ ಬೆಂಗಳೂರಿನಲ್ಲಿ ದಾಖಲೆ ಮಾರಾಟ ಕಂಡ ಆಲ್ಕೋಹಾಲ್
ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ವಿರುದ್ಧ ಕಟ್ಟಕಡೆಯ ಸಮರ ನಡೆಯುತ್ತಿದೆ. ಸರ್ಕಾರದ ಜೊತೆ ಜನರು ಕೂಡ ಕೈ ಜೋಡಿಸಿದ್ದಾರೆ. ಲಾಕ್ಡೌನ್ ಆದರೆ ಎಕಾನಮಿ ಬೀಳುತ್ತೆ ಅಂತ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಕಳೆಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಧ್ಯ ಮಾರಾಟ ಜೋರಾಗಿ ನಡೆದಿದೆ. ಲಾಕ್ಡೌನ್ನಲ್ಲಿ ಬಾರ್ ಅಂಡ್ ವೈನ್ ಶಾಪ್ಗಳು ತೆರೆದಿರುವುದಿಲ್ಲ. ಹೀಗಾಗಿ ಜನ ಲಾಕ್ಡೌನ್ಗೆ ಮುನ್ನವೇ ಸ್ಟಾಕ್ ಮೊರೆ ಹೋಗಿದ್ದಾರೆ. ಒಂದುವಾರಕ್ಕೆ ಬೇಕಾಗುವಷ್ಟು ಮದ್ಯ ಸ್ಟಾಕ್ ಮಾಡಿಕೊಂಡಿರುವ ಮದ್ಯ ಪ್ರಿಯರು ಅಬಕಾರಿ ಇಲಾಖೆಯನ್ನು ಸಮೃದ್ಧಗೊಳಿಸಿದ್ದಾರೆ.
ಈ ಹಿಂದೆ ಸರ್ಕಾರ ಮೊದಲ ಹಂತದ ಲಾಕ್ಡೌನ್ ಹೇರಿದ್ದ ಸಂದರ್ಭದಲ್ಲಿ ಎಣ್ಣೆ ಸಿಗದೆ ಮದ್ಯ ಪ್ರಿಯರು ಪರದಾಡಿದ್ದರು. ಆದರೆ ಈಗ ಪಾಠ ಕಲಿತಿದ್ದಾರೆ. ಲಾಕ್ಡೌನ್ಗೆ ಮೊದಲೇ ಎಲ್ಲವನ್ನೂ ಕೊಂಡುಕೊಂಡು ಕಿಕ್ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಕಳೆದ 2 ದಿನಗಳಲ್ಲಿ ಸರಿಸುಮಾರು 230 ಕೋಟಿ ರೂಪಾಯಿಯಷ್ಟು ಮೌಲ್ಯದ ಅಬಕಾರಿ ವಹಿವಾಟು ನಡೆದಿದೆ ಎನ್ನಲಾಗುತ್ತಿದೆ.
You may like
ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ
Karavali Utsava | ಬೆಂಗಳೂರಲ್ಲಿ ಕರಾವಳಿಗರ ಉತ್ಸವ
Bangalore Water Crisis | ಬೆಂಗಳೂರಿಗೆ ಬೇಕಿದೆ ಕುಡಿಯುವ ನೀರಿನ ಗ್ಯಾರೆಂಟಿ – ಅಶೋಕ್
ಬೆಂಗಳೂರಿನ ಬರಕ್ಕೆ ಅಸಲಿ ಕಾರಣವೇನು?
ನೊಡಲ್ ಅಧಿಕಾರಿಗಳ ನಿಯೋಜನೆ; ಎಸ್.ಒ.ಪಿ ಜಾರಿ; ಪ್ರತ್ಯೇಕ ಕೌಂಟರ್ ವ್ಯವಸ್ಥೆ
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್