ಸಿನಿಮಾ
Rashmika Mandanna | ನೀವು ತುಂಬಾ ಸ್ಪೆಷಲ್, ಐ ಲವ್ ಯೂ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಯಾರಿಗೆ.?

ಜಪಾನ್ : ಬಹುಭಾಷಾ ನಟಿ ಎಂದೇ ಗುರುತಿಸಿಕೊಂಡಿರೋ ಕನ್ನಡದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೊಸತೊಂದು ಪೋಸ್ಟ್ ಸಖತ್ ವೈರಲ್ ಆಗಿದೆ. ರಶ್ಮಿಕಾ ಜಪಾನ್ ಟೂರ್ನಲ್ಲಿದ್ದು ಕೆಲವೊಂದು ಸ್ಪೆಷಲ್ ಫೋಟೋಗಳ ಜೊತೆ ಒಂದಿಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಹಾಟ್ ಫೋಟೋಗಳನ್ನ ಕೂಡ ರಶ್ಮಿಕಾ ಶೇರ್ ಮಾಡ್ಕೊಂಡಿದ್ದಾರೆ.
ಇಷ್ಟೇ ಆಗಿದ್ರೆ ಸುದ್ದಿ ಆಗ್ತಾ ಇರಲಿಲ್ಲ. ಇದರ ಜೊತೆ ನೀವು ತುಂಬಾ ಸ್ಪೆಷಲ್, ಐ ಲವ್ ಯೂ ಅಂತ ರಶ್ಮಿಕಾ ಹೇಳಿರೋದು ಚರ್ಚಗೆ ಕಾರಣ. ಹಾಗಿದ್ರೆ ರಶ್ಮಿಕಾ ಐ ಲವ್ ಯೂ ಅಂತ ಹೇಳಿದ್ದು ಯಾರಿಗೆ.? ನೀವು ತುಂಬಾ ಸ್ಪೆಷಲ್ ಅಂತ ಹೇಳಿದ್ದು ಯಾರಿಗೆ ಅನ್ನೋದು ಸದ್ಯ ಸಿನಿಮಾ ರಂಗದ ಕುತೂಹಲದ ವಿಚಾರ.
ಯೆಸ್, ರಶ್ಮಿಕಾ ಬರೆದುಕೊಂಡಿರೋದು ಜಪಾನ್ ಬಗ್ಗೆ. ಜಪಾನ್ ನ ಅನಿಮೆ ಪ್ರದೇಶದ ಬಗ್ಗೆ. ಜಪಾನ್ ನ ಅನಿಮೆ ಪ್ರದೇಶಕ್ಕೆ ಭೇಟಿ ನೀಡಿದ್ದ ರಶ್ಮಿಕಾ, ಇದು ಅವಿಸ್ಮರಣಿಯ, ಇದು ಪ್ರಶಸ್ತಿ ನೀಡುವ ಭಾಗ. ಇಲ್ಲಿನ ಫುಡ್, ಹವಾಮಾನ, ವಾತಾವರಣ ತುಂಬಾ ಸ್ವಚ್ಛವಾಗಿದೆ. ಇಲ್ಲಿನ ಸ್ಥಳ, ಜನ ನಿಜಕ್ಕೂ ಸುಂದರ ಮತ್ತು ಅದ್ಭುತ. ಜಪಾನ್ ದೇಶ ಹಾಗೂ ಜನತೆಗೆ ಧನ್ಯವಾದ. ಐ ಲವ್ ಯೂ, ನೀವು ತುಂಬಾ ಸ್ಪೆಷಲ್ ಅಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?