Featured
ವಿಶ್ವಕಪ್ ವಿಜೇತರಿಗೆ ಸಿಕ್ಕಿದ್ದು ಚಿಲ್ಲರೆ ದುಡ್ಡು- ದಟ್ಟ ದರಿದ್ರವಾಗಿತ್ತು ಕ್ರಿಕೆಟಿಗರ ಸ್ಯಾಲರಿ..!
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ತನ್ನ ಆಟಗಾರರಿಗೆ ಅತಿ ಹೆಚ್ಚು ವೇತನ ಕೊಡುತ್ತಾ ಬಂದಿರುವ ಸಂಸ್ಥೆ. ಅದೆಷ್ಟೊ ಬಾರಿ ಟೀಮ್ ಇಂಡಿಯಾ ಆಟಗಾರರ ವೇತನವನ್ನ ಬೇರೆ ದೇಶದ ಆಟಗಾರರ ವೇತನವನ್ನ ಹೋಲಿಕೆ ಮಾಡಲಾಗುತ್ತದೆ.
ಇದೀಗ ಪಾಕ್ನ ಮಾಜಿ ಕ್ರಿಕೆಟಿಗ ರಮೀಜ್ ರಾಜಾ 1983ರ ವಿಶ್ವಕಪ್ನ ನಂತರ ಭಾರತೀಯ ಆಟಗಾರರು ಎಷ್ಟು ವೇತನ ಪಡೆಯುತ್ತಿದ್ದರು ಅನ್ನೋದನ್ನ ರಿವೀಲ್ ಮಾಡಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ, 1986-87ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಪ್ರತಿಯನ್ನ ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತೇನೆ.
1983ರ ವಿಶ್ವಕಪ್ ಗೆದ್ದಾಗ ಭಾರತೀಯ ಆಟಗಾರರು ಪಡೆಯುತ್ತಿದ್ದ ವೇತನ ಪ್ರತಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮ ಸಿಗುತ್ತಿದ್ದ ವೇತನವನ್ನ ತಮ್ಮ ತಂಡದ ಅಟಗಾರರ ವೇತನದ ಜೊತೆ ಹೋಲಿಸಿಕೊಂಡಿದ್ದಾರೆ.
ನನಗೆ ಈಗಲೂ ನೆನಪಿದೆ ಭಾರತ ವಿರುದ್ಧ ಐದು ಟೆಸ್ಟ್ 6 ಏಕದಿನ ಆಡಿದಕ್ಕೆ 55 ಸಾವಿರ ವೇತನ ಸಿಕ್ಕಿತ್ತು ಎಂದು ರಮೀಜ್ ರಾಜಾ ಬರೆದುಕೊಂಡಿದ್ದಾರೆ. ಈಗಿನ ವೇತನದ ಪ್ರಕಾರ ಬಿಸಿಸಿಐ ಎ ಪ್ಲಸ್ ಶ್ರೇಣಿಯವರಿಗೆ 7 ಕೋಟಿ ಹಣ ಕೊಡುತ್ತೆ. ನಾಯಕ ವಿರಾಟ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬೂಮ್ರಾ ಈ ವೇತನ ಪಡೆಯುವ ಆಟಗಾರರಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?