ಬೆಂಗಳೂರು
ರಾಮೇಶ್ವರಂ ಕೆಫೆ ಸ್ಫೋಟ: ಎನ್ ಐ ಎ ಗೆ ತನಿಖೆ ಹೊಣೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು..ಈ ಪ್ರಕರಣವನ್ನ ಬಿಜೆಪಿಯವರು ಎನ್ ಐ ಎಗೆ ವಹಿಸಿ ಅಂತ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ರು. ಇದಾದ ಬೆನ್ನಲ್ಲೇ ಇಂದು ಕೇಂದ್ರ ಗೃಹ ಸಚಿವಾಲಯ ಎನ್ ಐ ಎ ತನಿಖೆಗೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಎಫ್ ಐ ಆರ್ ದಾಖಲಿಸಿಕೊಂಡಿರುವ ಎನ್ ಐ ಎ ತನಿಖೆ ಚುರುಕುಗೊಳಿಸಲಿದೆ. ಬಾಂಬ್ ಸ್ಫೋಟ ಬಳಿಕ ಆರೋಪಿಯ ಮುಖ ಚಹರೆ ಪತ್ತೆಯಾಗಿದೆ. ಈ ಜಾಡು ಹಿಡಿದಿರುವ ಎನ್ ಐ ಎ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿ ಆರೋಪಿಯನ್ನ ಬಂಧಿಸುವ ಜವಾಬ್ದಾರಿ ವಹಿಸಿಕೊಂಡಿದೆ.
ಇನ್ನು ಕೃತ್ಯದಲ್ಲಿ ಮಂಗಳೂರು ಬ್ಲಾಸ್ಟ್ ರೀತಿಯೇ ಟೈಮರ್ ಬಳಕೆ ಮಾಡಿರೋದು, ನೆಟ್ಟು ಬೋಲ್ಟ್ ದೊರಕಿರೋದನ್ನ ನೋಡಿದ್ರೆ, ಇದು ಉಗ್ರ ಸಂಘಟನೆಯ ಕೈವಾಡವಿರಬಹುದು ಎಂಬ ಶಂಕೆಯಡಿ ಮಂಗಳೂರು, ಕೇರಳ, ತಮಿಳುನಾಡು, ಮಡಿಕೇರಿ ಮುಂತಾದ ಸ್ಥಳಗಳಲ್ಲಿ ತನಿಖಾ ತಂಡ ತನಿಖೆ ನಡೆಸಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?