Featured
ಸಹೋದರ ಸತೀಶ್-ಲಖನ್ಗೆ ರಮೇಶ್ ಜಾರಕಿಹೊಳಿ ಡಬಲ್ ಶಾಕ್..! ಇದೇನ್ ಗುರೂ ಇದು..
![](https://risingkannada.com/wp-content/uploads/2019/11/jarkiholi.jpg)
ಬೆಳಗಾವಿ : ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರೋ ರಮೇಶ್ ಜಾರಕಿಹೊಳಿ ಹೊಸದೊಂದು ಶಾಕ್ ನೀಡಲು ತಯಾರಿ ನಡೆಸಿದ್ದಾರೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಪಕ್ಷದ ಜೊತೆ ಸಹೋದರರಾದ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿಗೆ ಭರ್ಜರಿ ಶಾಕ್ ನೀಡ್ತಿದ್ದಾರೆ.
ಯೆಸ್, ಕಾಂಗ್ರೆಸ್ ವಶದಲ್ಲಿರೋ ಬೆಳಗಾವಿ ಜಿಲ್ಲಾ ಪಂಚಾಯತಿಯನ್ನು, ತನ್ನ ವಶಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣಾ ಕಟಾಂಬ್ಳೆ ವಿರುದ್ಧ ಅವಿಶ್ವಾಸ ಮಂಡಲಿಸಲಾಗ್ತಿದೆ. ಇದಕ್ಕಾಗಿ, ರಮೇಶ ಜಾರಕಿಹೊಳಿ ಬೆಂಬಲಿತ 22 ಜಿಪಂ ಸದಸ್ಯರು ಬೆಂಬಲ ವಾಪಸ್ ಪಡೆಯೋ ಸಾಧ್ಯತೆ ಇದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಗೋಕಾಕ ಸ್ಥಳೀಯ ಸಂಸ್ಥೆಗಳ ಬಳಿಕ ನೇರ ಜಿಪಂಗೆ ಸಾಹುಕಾರ್ ಕೈ ಹಾಕಿದ್ದು, ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ರಮೇಶ ಜಾರಕಿಹೊಳಿ ಬೆಂಬಲಿತ ಜಿಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ. ಸದ್ಯ, ರಮೇಶ ಜಾರಕಿಹೊಳಿ ಗ್ರೀನ್ ಸಿಗ್ನಲ್ಗೆ ಸದಸ್ಯರು ಕಾಯ್ತಿದ್ದು, ಇನ್ನೇನು, ಬೆಳಗಾವಿ ಜಿಲ್ಲಾ ಪಂಚಾಯ್ತಿಯಲ್ಲಿ ಮತ್ತೆ ಕಮಲ ಅರಳುವ ಸಾಧ್ಯತೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?