Featured
ರಾಜಸ್ಥಾನದಲ್ಲಿ ತೀವ್ರಸ್ವರೂಪದ ರಾಜಕೀಯ ಬಿಕ್ಕಟ್ಟು – ಎರಡನೇ ಸಿಎಲ್ಪಿ ಸಭೆಗೂ ಗೈರಾದ ಸಚಿನ್ ಪೈಲೆಟ್..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್:

ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧದ ಅಸಮಾದಾನ ರಾಜಸ್ಥಾನದಲ್ಲಿ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಿಎಂ ವಿರುದ್ಧ ಮುನಿಸಿಕೊಂಡು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರೋ, ಡಿಸಿಎಂ ಸಚಿನ್ ಪೈಲೆಟ್ ಸಿಎಲ್ಪಿ ಸಭೆಗೆ ಮತ್ತೊಮ್ಮೆ ಗೈರಾಗಿ ಬಂಡಾಯದ ತೀವ್ರತೆಯನ್ನ ಹೆಚ್ಚಿಸಿದ್ದಾರೆ.
ಸೋಮವಾರ ಮೊಲದ ಸುತ್ತಿನ ಸಿಎಲ್ಪಿ ಸಭ ನಡೆದಿತ್ತು. ಗೆಹ್ಲೋಟ್ ಬೆಂಬಲಿಸಿದ ಶಾಕಸಕನ್ನ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಸಚಿನ್ ಪೈಲೆಟ್ ಅವರ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಅಖಾಡಕ್ಕಿಳಿದಿತ್ತು. ಸಚಿನ್ ಪೈಲೆಟ್ಗೆ ಸಿಎಲ್ಪಿ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಿತ್ತು.
ಇದಕ್ಕೂ ಮಣಿಯದ ಸಚಿನ್ ಪೈಲೆಟ್ ಸಿಎಲ್ಪಿ ಸಭೆಗೆ ಗೈರಾಗಿ ಅಸಮಾದಾನದ ಸ್ಪಷ್ಟ ಸಂದೇಶ ರವಾನಿಸಿದ್ದರು. ಇದು ಹೈಕಮಾಂಡ್ಗೆ ಕೋಪ ತರಿಸಿದ್ದು ಶಿಸ್ತು ಕ್ರಮದ ಎಚ್ಚರಿಕೆಯನ್ನ ನೀಡಿತ್ತು.
ಸಚಿನ್ ಪೈಲೆಟ್ ಪಕ್ಷದ ವಿರುದ್ಧವೆ ಬಂಡಾಯ ಎದ್ದಿರುವುದರಿಂದ ಬಿಜೆಪಿ ಸೇರುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರೋ ಸಚಿನ್, ಪಕ್ಷ ಬದಲಿಸೋ ಯಾವುದೇ ಇರಾದೆ ಇಲ್ಲ ಅಂದಿದ್ದಾರೆ. ಆದರೂ, ಸಿಎಂ ವಿರುದ್ಧದ ಅವರ ಅಸಮಾದಾನ ಯಾವಾಗ ಶಮನವಾಗುತ್ತೋ ಅನ್ನೋ ಪ್ರಶ್ನೆ ಕೈ ಪಾಳೆಯವನ್ನ ಕಾಡುತ್ತಲೇ ಇದೆ.
You may like
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು
ತುಮಕೂರಿನಲ್ಲಿ ದ್ವಿಶತಕ ಬಾರಿಸಿದ ಕೊರೊನಾ: ಇಬ್ಬರು ಬಲಿ
ನಿಲ್ಲದ ಕೊರೊನಾ ಅಬ್ಬರ : 106 ಬಲಿ, 8,852 ಹೊಸ ಕೇಸ್
2021ರ ಅರಂಭದಲ್ಲೆ ಸಿಗಲಿದೆ ಕೊರೊನಾ ಲಸಿಕೆ : ಪುಣೆಯಲ್ಲಿ ಎರಡು ಲಸಿಕೆಗಳ ಮೇಲೆ ಪ್ರಯೋಗ
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ದಾಖಲೆಯ 8,161 ಕೇಸ್, 148 ಬಲಿ