Featured
ಪವಿತ್ರ ಅಮರನಾಥ ಗುಹೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್: ಪಾಕ್ ಕುತಂತ್ರ ನಡೆಸಿದರೆ ತಕ್ಕ ಶಾಸ್ತಿ ಮಾಡಲು ಸೂಚನೆ
![](https://risingkannada.com/wp-content/uploads/2020/07/rajanath-singh-amaranath-1.jpg)
ರೈಸಿಂಗ್ ಕನ್ನಡ :
ಶ್ರೀನಗರ :
ಪವಿತ್ರ ಗುಹೆ ಅಮರನಾಥ ಕ್ಷೇತ್ರಕ್ಕೆ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಎರಡು ದಿನಗಳ ಕಾಲ ಕಣಿವೆ ರಾಜ್ಯದ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಎರಡನೇ ದಿನದ ಪ್ರವಾಸದಲ್ಲಿ ಇಲ್ಲಿನ ಅಮರನಾಥಕ್ಕೆ ಭೇಟಿ ಕೊಟ್ಟು ಒಂದು ಗಂಟೆ ಕಾಲ ಕಳೆದರು. ಅಮರನಾಥ ಕ್ಷೇತ್ರ ಕೋಟ್ಯಂತರ ಹಿಂದೂಗಳ ಆರಾಧ್ಯ ಕ್ಷೇತ್ರ . ವರ್ಷಕೊಮ್ಮೆ ಸಾವಿರಾರು ಭಕ್ತರು ಬೆಟ್ಟಗುಡ್ಡಗಳನ್ನ ಹತ್ತಿ ದೇವರ ದರ್ಶನ ಪಡೆಯುತ್ತಾರೆ.
![](https://risingkannada.com/wp-content/uploads/2020/07/rajanath-amarnath-3.png)
ರಾಜನಾಥ್ ಸಿಂಗ್ ಜಮ್ಮುಗೆ ಭೇಟಿ ನೀಡಿದ ಬೆನ್ನಲ್ಲೆ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮಾಡಿ ಗಡಿ ನಿಯಮಗಳನ್ನ ಉಲ್ಲಂಘಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಕುತಂತ್ರ ನಡೆಸಿದರೆ ಸರಿಯಾದ ಉತ್ತರ ಕೊಡಿ ಎಂದು ಸೂಚನೆ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಜೊತೆ ಜಾಗರೂಕತೆಯಿಂದ ಇರಬೇಕೆಂದು ಸಭೆಯಲ್ಲಿ ರಕ್ಷನ ಸಚಿವರು ಸೇನೆಗೆ ತಿಳಿಸಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್