ರೈಸಿಂಗ್ ಕನ್ನಡ : ರಾಜಮೌಳಿ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಅದೆಷ್ಟೋ ಮಂದಿಯ ಕನಸು. ಅದರಲ್ಲೂ ‘ಬಾಹುಬಲಿ’, ‘RRR’ ಬಳಿಕವಂತೂ ಜಕ್ಕಣ್ಣನಿಗೆ ಗ್ಲೋಬಲ್ ಲೆವೆಲ್ನಲ್ಲಿ ಕ್ರೇಜ್ ಹೆಚ್ಚಾಗಿದೆ. ರಾಜಮೌಳಿಯ ಮುಂದಿನ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.
‘RRR’ ಸಿನಿಮಾ ಹಾಲಿವುಡ್ ದಿಗ್ಗಜರನ್ನೂ ಬೆಚ್ಚಿ ಬೀಳಿಸಿತ್ತು. ರಾಜಮೌಳಿಯ ನಿರ್ದೇಶನಕ್ಕೆ ಹಾಲಿವುಡ್ ಸ್ಟಾರ್ ನಿರ್ದೇಶಕರೇ ಥ್ರಿಲ್ ಆಗಿದ್ದರು. ಬೇರೆ ಬೇರೆ ಸಮಯದಲ್ಲಿ ರಾಜಮೌಳಿಯ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದರು. ಈಗ ಎಲ್ಲರ ಕಣ್ಣು ಅವರ ಮುಂದಿನ ಸಿನಿಮಾ ಮೇಲಿದೆ.
ರಾಜಮೌಳಿ ಮುಂದಿನ ಸಿನಿಮಾ ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಜೊತೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗಾಗಲೇ ಸಿನಿಮಾ ಕಥೆ ಬಗ್ಗೆನೂ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಈ ಮಧ್ಯೆನೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಾಜಮೌಳಿಗೆ ಆಮಿರ್ ಖಾನ್ ವಿಲನ್ ಅನ್ನೋ ಸುದ್ದಿ ಓಡಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಹಾಗಂತ ರಾಜಮೌಳಿಗೂ ಆಮಿರ್ ಖಾನ್ ನಡುವೆ ವೈಮನಸ್ಸು ಶುರುವಾಗಿದೆಯಾ? ಅಂತ ಅಂದುಕೊಳ್ಳಬೇಡಿ. ರಾಜಮೌಳಿ ಮುಂದಿನ ಸಿನಿಮಾದಲ್ಲಿ ಆಮಿರ್ ಖಾನ್ ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ತಮಿಳು ಫಿಲ್ಮ್ ಕ್ರಿಟಿಕ್ ಟ್ವೀಟ್ ಮಾಡಿದ ಮೇಲೆ ಮತ್ತಷ್ಟು ಸದ್ದು ಮಾಡುತ್ತಿದೆ.
ಮಹೇಶ್ ಬಾಬು ಹಾಗೂ ಎಸ್ಎಸ್ ರಾಜಮೌಳಿ ಜಂಗಲ್ ಅಡ್ವೆಂಚರ್ ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್ ಆಗಿ ನಟಿಸುವ ಸಾಧ್ಯತೆಯಿದೆ” ಎಂದು ತಮಿಳಿನ ಕ್ರಿಟಿಕ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ವಿಲನ್ ಆಗಿ ನಟಿಸುತ್ತಿರುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?