Featured
ವರುಣನ ಆರ್ಭಟಕ್ಕೆ ನಲುಗಿದ ಕರ್ನಾಟಕ – ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಸಂಪರ್ಕ ಕಡಿತ- ವಾಹನ ಸವಾರರ ಪರದಾಟ
ರೈಸಿಂಗ್ ಕನ್ನಡ:
ಯಾದಗಿರಿ:
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಕೆಲವು ಕಾಲ ಬಂದಾಗಿತ್ತು. ಶಹಾಪುರದಿಂದ ಕಲಬುರಗಿ, ಬೀದರ್ ಭಾಗಕ್ಕೆ ತೆರಳುವ ಬಸ್, ಲಾರಿ ಹಾಗು ಇತರ ವಾಹನ ಸವಾರರು ಪರದಾಡಿದ್ರು. ಕೆಲವು ವಾಹನಗಳು ತುಂಬಿ ಹರಿಯುತ್ತಿರುವ ನೀರಿನಲ್ಲಿ ಚಲಿಸಿದ್ರೆ, ಇನ್ನೂ ಕಾರು, ಬೈಕ್ ಗಳು ಸೇರಿದಂತೆ ಮಳೆ ನೀರಿನಲ್ಲಿ ಸಿಲುಕಿದ ವಾಹನಗಳನ್ನು ತೆಗೆಯಲು ಹರಸಹಸಪಟ್ಟರು.
ಶಹಾಪುರ ನಗರದ ಹೊರವಲಯದ ಹಳ್ಳ ಕೊಳ್ಳಗಳು ನದಿಯಂತೆ ತುಂಬಿ ರಭಸದಿಂದ ಹರಿದವು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಮಳೆಯಿಂದ ಹೈರಾಣಾದ್ರು. ಇನ್ನು ಜಿಲ್ಲೆಯ ಸುರಪುರ, ಯಾದಗಿರಿಯಲ್ಲಿಯೂ ಕೂಡ ರಾತ್ರಿಯಿಡಿ ಮಳೆರಾಯ ಅರ್ಭಟಿಸಿದ್ದಾನೆ. ಮಳೆಯಿಂದ ತಗ್ಗು ಪ್ರದೇಶದ ಜನರು ರಾತ್ರಿಯಿಡಿ ನಿದ್ದೆಮಾಡೆ ಜಾಗರಣೆ ಮಾಡಿದ್ರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಒಂದು ಕಡೆ ಉತ್ತಮ ಮಳೆಯಾಗ್ತಿದ್ದರೆ, ಇನ್ನೊಂದೆಡೆ ಮಳೆಯಿಂದ ತಗ್ಗು ಪ್ರದೇಶದ ಜನರ ಬದುಕು ಅಸ್ತವ್ಯಸ್ತತೆಯಾಗಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲಿಕಿಸಿದೆ.
You may like
ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!
ಬಿರು ಬಿಸಿಲಿನ ಮಧ್ಯೆ…ರಾಜ್ಯದಲ್ಲಿ ಮಳೆಯ ಸಿಂಚನ..!
ಬೇಗೆ ತಣಿಸಲಿದ್ದಾನಾ ವರುಣ ?: ಬೇಸಿಗೆಯಲ್ಲಿ ಮಳೆ ಮುನ್ಸೂಚನೆ!
ಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!