Featured
ರಾಯಚೂರಿನಲ್ಲಿ ಆರೋಗ್ಯ ಇಲಾಖೆ ನಾಲ್ವರು ಸಿಬ್ಬಂದಿಗೆ ಕೊರೊನಾ – ಸಂಪೂರ್ಣ ಇಲಾಖೆಯೇ ಸೀಲ್‌ಡೌನ್..!

ರೈಸಿಂಗ್ ಕನ್ನಡ :
ರಾಯಚೂರು :
ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಕೊರೊನಾ ಮಹಾಮಾರಿ ವಿರುದ್ಧ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾಕಷ್ಟು ಶ್ರಮ ಪಡುತ್ತಿದಾರೆ. ಕೆಲ ದಿನಗಳ ಹಿಂದಷ್ಟೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಕೊರೊನಾ ಎಂಟ್ರಿ ಕೊಟ್ಟಿತ್ತು. ಆದ್ರೀಗ ಆರೋಗ್ಯ ಇಲಾಖೆಗೆ ವಕ್ಕರಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಾಲ್ವರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.
ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರೋದ್ರಿಂದ, ಜಿಲ್ಲಾ ಕೇಂದ್ರ ಕಚೇರಿಯನ್ನೇ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನ ಮನೆಗೆ ಕಳುಹಿಸಲಾಗಿದೆ. ಇನ್ನೂ ಕಚೇರಿಯನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
You may like
ಯಾದಗಿರಿಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯ
ವಿದ್ಯುತ್ ಸ್ಪರ್ಶಿಸಿ ಯಾದಗಿರಿಯಲ್ಲಿ ಇಬ್ಬರು ಯುವಕರ ಸಾವು
ಕೊರೊನಾ ವಿಚಾರದಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ಎಡವಿದೆ – ಬಿ.ವಿ ನಾಯಕ್ ಆರೋಪ..!
ಬಿಸಿಲೂರಲ್ಲೂ ಕೊರೊನಾ ಕಾಟ- ಲಾಕ್ಡೌನ್ ಲೆಕ್ಕಿಸದೆ ರಸ್ತೆಗಳಿದವರ ವಾಹನ ಸೀಜ್
ನಾರಾಯಾಣಪುರ ಜಲಾಶಯ ಭರ್ತಿ ಹಿನ್ನಲೆ: ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ
ರಾಯಚೂರಿನಲ್ಲಿ ಒಂದೇ ದಿನ 41 ಪ್ರಕರಣ ಪಾಸಿಟಿವ್ : ಆತಂಕ ಹುಟ್ಟಿಸಿದ ಆರೋಗ್ಯ ಇಲಾಖೆ ವರದಿ