Featured
ಭಾರತ-ಚೀನಾ ಯುದ್ಧ ವಿಮಾನಗಳ ತಾಕತ್ತೇನು ? ರಗಡ್ ರಾಫೆಲ್ ಮುಂದೆ ಚೀನಾ ಜೆ-20 ಏನೇನು ಅಲ್ಲ..!

ರೈಸಿಂಗ್ ಕನ್ನಡ:
ದೆಹಲಿ:
ಭಾರತೀಯ ಸೇನೆಗೆ ನೂರಾನೆ ಬಲ ಬಂದಿದೆ. ಮೊದಲ ಹಂತದಲ್ಲಿ ಐದು ರಾಫೆಲ್ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಪ್ರಯಾಣ ಬೆಳಸಿದ್ದು ಬುಧವಾರ ಭಾರತೀಯ ಸೇನೆಯನ್ನ ಸೇರ್ಪಡೆಗೊಳ್ಳಲಿದೆ.
ರಗಡ್ ರಾಫೆಲ್ ಯುದ್ಧ ವಿಮಾನ ಸೇರ್ಪಡೆಯಾಗುತ್ತಿರುವುದು ಭಾರತೀಯ ಸೇನೆಗೆ ಹೊಸ ಉತ್ಸಾಹ ತುಂಬಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ರಾಫೆಲ್ ಯುದ್ಧ ವಿಮಾನದ ತಾಕತ್ತು ಈಗ ಚರ್ಚೆಯ ವಿಚಾರವಾಗಿದೆ. ಅದರಲ್ಲೂ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದ ಚೀನಾ ಜೊತೆಗಿನ ಸಂಘರ್ಷ ಉಭಯ ದೇಶಗಳ ಸೇನಾ ಸಾಮರ್ಥ್ಯವನ್ನ ಪರೀಕ್ಷಿಸುವಂತಾಗಿದೆ.
ಅದರಲ್ಲೂ ಉಭಯ ದೇಶಗಳ ಯುದ್ಧ ವಿಮಾನಗಳ ತಾಕತ್ತು ಚರ್ಚೆಗಳನ್ನ ಹುಟ್ಟುಹಾಕಿದೆ. ರಾಫೆಲ್ 4.5 ಪೀಳಿಗಿಯದ್ದು , ಚೀನಾದ ಜೆ-20 ಐದನೇ ಪೀಳಿಗೆಯದ್ದು, ಎಕ್ಸ್ಪರ್ಟ್ಗಳ ಪ್ರಕಾರ ಚೀನಿ ಯುದ್ಧ ವಿಮಾನಗಳಿಗಿಂತ ರಾಫೆಲ್ ಯುದ್ಧ ವಿಮಾನಗಳಿಗೆ ಹೆಚ್ಚು ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
ಚೀನಾದ ಜೆ-20 ಚೆಂಗ್ಡು ಫೈಟರ್ಗಿಂತ ರಾಫೆಲ್ ಉನ್ನತ ಸ್ಥಾನದಲ್ಲಿದೆ. ಜೆ-20 5ನೇ ಪೀಳಿಗಿಯ ಫೈಟರ್ ಆಗಿದ್ದರೂ ಅದು 3.5ರ ಪೀಳಿಗೆ ಸಮಾನವಾಗಿದೆ. ಸುಖೋಯ್ ವಿಮಾನದಲ್ಲಿರುವ ಎಂಜೀನ್ ಜೆ-20ಯಲ್ಲಿದೆ ಎಂದು ಏರ್ ಮಾರ್ಷಲ್ ಆರ್.ನಂಭಿಯಾರ್ ಹೇಳಿದ್ದಾರೆ.
ಒಂದು ವೇಳೆ ಚೀನಾ ರಾಫೆಲ್ಗೆ ಸ್ಪರ್ಧೆ ನೀಡಲು ರಷ್ಯಾ ಯುದ್ಧ ವಿಮಾನಗಳನ್ನ ಖರೀದಿ ಮಾಡಿದರೆ ರಾಫೆಲ್ಗೆ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?