Featured
ರಾಜಕೀಯಕ್ಕೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ..? : ಯಾವ ಪಕ್ಷ..? ರಾಧಿಕಾ ಹೇಳಿದ್ದೇನು..?
ರೈಸಿಂಗ್ ಕನ್ನಡ : ರಾಧಿಕಾ ಕುಮಾರಸ್ವಾಮಿ ಸದ್ಯ ಸಿನಿಮಾದಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲೂ ಹಲವು ಸಿನಿಮಾಗಳಲ್ಲಿ ರಾಧಿಕಾ ಫುಲ್ ಬ್ಯುಸಿಯಾಗಿದ್ದಾರೆ. ಮಗುವಿನ ತಾಯಿ ಆಗಿದ್ರೂ, ತಮ್ಮ ಗ್ಲಾಮರ್ ಮಾತ್ರ ಒಂದಿಷ್ಟು ಕಡಿಮೆಯಾಗಿಲ್ಲ. ಹೀಗಿರುವಾಗ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ..? ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜಕೀಯ ಅಖಾಡ ಶುರು ಮಾಡ್ತಾರಾ ಅನ್ನೋ ಪ್ರಶ್ನೆಗಳಿಗೆ ಸ್ವತಃ ರಾಧಿಕಾ ಉತ್ತರ ಕೊಟ್ಟಿದ್ದಾರೆ ನೋಡಿ.
ನನಗೆ ಸಿನಿಮಾ ಅಂದ್ರೆ ತುಂಬಾನೇ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ, ಡ್ಯಾನ್ಸ್ ಅಂದ್ರೆ ಪ್ರೀತಿ. ಡ್ಯಾನ್ಸ್ ಬರದೇ ಇದ್ರೂ, ನೋಡುತ್ತಲೇ ಕಲಿತೆ. ಮನೆಯವರಿಗೂ ನಾನು ಸಿನಿಮಾದಲ್ಲೆ ಇರಬೇಕು ಅನ್ನೋ ಆಸೆ ಇದೆ. ಎಲ್ಲಿವರೆಗೆ ನಾಯಕಿಯಾಗಿ ಇರ್ತೇನೋ ಅಲ್ಲಿವರೆಗೆ ಸಿನಿಮಾ ಮಾಡ್ತೀನಿ. ಆಮೇಲೆ ಸಿನಿಮಾ ನಿರ್ಮಾಣ ಮಾಡ್ತೀನಿ ಎಂದಿದ್ದಾರೆ. ರಾಜಕೀಯದಿಂದ ದೂರ ದೂರ ಅಂತ, ನೋ ಪಾಲಿಟಿಕ್ಸ್ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ರಾಧಿಕಾ ಸದ್ಯ ಭೈರಾದೇವಿ ಹಾಗೂ ದಯಮಂತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಎರಡೂ ಸಿನಿಮಾಗಳು ಬಿಡುಗಡೆಗೆ ರೆಡಿಯಾಗ್ತಿವೆ. ಎರಡೂ ಸಿನಿಮಾಗಳಲ್ಲಿ ರಾಧಿಕಾ ಡಿಫರೆಂಟ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ದಯಮಂತಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?