Featured
ರಾಬರ್ಟ್ ವರ್ಸಸ್ ಫ್ಯಾಂಟಮ್! ಎರಡರಲ್ಲಿ ನಿಮಗೆ ಯಾವುದು ಇಷ್ಟವಾಯ್ತು ?

ರೈಸಿಂಗ್ ಕನ್ನಡ :- ಸಿನಿಮಾ ತಯಾರಾಗಿ ಇನ್ನೇನು ಬಿಡುಗಡೆಗೆ ಸಿದ್ಧವಿದೆ ಎನ್ನುವಾಗ ಬಗೆಬಗೆಯ ಪೋಸ್ಟರ್ ಗಳನ್ನು ರಿಲೀಸ್ ಮಾಡುವುದು ಒಂದು ಟ್ರೆಂಡ್. ಹಾಗೆಯೇ ,ಸಿನಿಮಾ ಸೆಟ್ಟೇರಿದಾಗ ಅದರಲ್ಲಿನ ಪ್ರಮುಖ ಪಾತ್ರಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ ಡಿಫರೆಂಟ್ ಆಗಿ ಏನಾದರೂ ಮಾಡಿ ಜನರ ಗಮನ ಸೆಲೆಯುವ ಹೊಸ ಪ್ರಯತ್ನವೂ ಈಗ ಚಂದನವನದಲ್ಲಿ ಹೆಚ್ಚಾಗಿದೆ.
ಚಾಲೆಂಜಿಂಗ್ ಸ್ಟಾರ್ ನಟನೆಯ ರಾಬರ್ಟ್ ಸಿನಿಮಾ ಬ್ಯಾಕ್ ಟು ಬ್ಯಾಕ್ ಪೋಸ್ಟರ್ ಗಳಿಂದಲೇ ಮಿಂಚುತ್ತಿದೆ. ಹಾಗಂತ ಸುದೀಪ್ ಸುಮ್ಮನೆ ಕೂಳಿತಿಲ್ಲ. ಅವರ ನಾಯಕತ್ವದ ಫ್ಯಾಂಟಮ್ ಸಿನಿಮಾದ ಹೊಸದೊಂದು ಪೋಸ್ಟರ್ ಹೊರಬಂದಿದೆ. ಯಾವ ಪೋಸ್ಟರ್ ಎಷ್ಟು ಚೆನ್ನಾಗಿದೆ ಎಂಬ ಬಗ್ಗೆ ಅಭಿಮಾನಿಗಳ ಲ್ಲಿ ಚರ್ಚೆ ಜೋರಾಗಿದೆ.
ರಾಬರ್ಟ್ ನಿರ್ದೇಶಕ ನಂದಕಿಶೋರ್ ಹಲವು ಥೀಮ್ ಗಳಲ್ಲಿ ಫೋಸ್ಟರ್ ವಿನ್ಯಾಸಗೊಳಿಸಿದ್ದಾರೆ. ಈಗ ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ ಕೂಡ ಪೋಸ್ಟರ್ ಪ್ರಹಸನ ಶುರುಮಾಡಿಕೊಂಡಂತಿದೆ.ಅದಕ್ಕೂ ಮುನ್ನ ಮದಗಜ ಚಿತ್ರತಂಡ ಕೂಡ ನಾಯಕಿ ಪಾತ್ರವನ್ನು ಪರಿಚಯಿಸಲು ವಿಭಿನ್ನವಾದ ಪ್ರಯೋಗ ಮಾಡಿತ್ತು.ಒಟ್ಟಾರೆಯಾಗಿ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಲು ಈ ಮಾರ್ಗವನ್ನು ನಿರ್ದೇಶಕರು ಅನುಸರಿಸುತ್ತಿದ್ದಾರೆ.
ನಟ ಸುದೀಪ್ ಮತ್ತು ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಜೊತೆಯಾಗಿ ಮಾಡುತ್ತಿರುವ ಚಿತ್ರಕ್ಕೆ ಫ್ಯಾಂಟಮ್ ಎಂದು ಶೀರ್ಷಿಕೆ ಇಡಲಾಗಿದೆ. ಆದರೆ ಅದರಲ್ಲಿ ಸುದೀಪ್ ಲುಕ್ ಹೇಗಿರಲಿದೆ ಎಂಬ ಸುಳಿವು ಸಿಕ್ಕಿರಲಿಲ್ಲ. ಇತ್ತೀಚಿಗೆ ಚಿತ್ರದ ಪ್ರೋಮೋ ಶೂಟ್ ಮಾಡಲಾಗಿತ್ತು. ಆ ಸಂಧರ್ಭದಲ್ಲಿ ಒಂದು ಪೋಟೋವನ್ನು ಅಭಿಮಾನಿಗಳ ಜೊತೆ ಅನೂಪ್ ಹಂಚಿಕೊಂಡಿದ್ದಾರೆ. ಸುದೀಪ್ ಅವರ ಅರ್ಧ ಮುಖವನ್ನು ಮಾತ್ರ ಆ ಫೋಟೋದಲ್ಲಿ ತೋರಿಸಲಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?