Connect with us

Featured

ಕೊರೊನಾಕ್ಕೆ ಬೆಚ್ಚಿಬಿದ್ದ ಬಟ್ಟೆಗಳು- ಮನುಷ್ಯರು ಮಾತ್ರವಲ್ಲ, ಪ್ಯಾಂಟ್, ಶರ್ಟ್​ಗಳೂ ಕ್ವಾರಂಟೈನ್..!

ರೈಸಿಂಗ್​ ಕನ್ನಡ:

ಬೆಳಗಾವಿ:

Advertisement


ಕೊರೊನಾ ಎಫೆಕ್ಟ್​ ಮನುಷ್ಯರಿಗೆ ಅಷ್ಟೇ ಅಲ್ಲ ನಾವು ಧರಿಸುವ ಬಟ್ಟೆಗಳಿಗೂ ತಟ್ಟಿದೆ. ಯಾಕೆಂದ್ರೆ ಕೊರೊನಾ ಲಾಕ್​ಡೌನ್​ ಸಡಿಲಿಕೆ ಆಗಿದೆ ಅಂತಾ ಯಾವುದೇ ಬ್ರ್ಯಾಂಡೆಡ್ ಅಂಗಡಿ ಹೋದ್ರೆ ಅಲ್ಲಿ ಪ್ಯಾಂಟ್, ಶರ್ಟ್, ಸೂಟ್ಸ್​ಗಳು ಕ್ವಾರಂಟೈನಲ್ಲಿ ಇಟ್ಟಿರುವ ದೃಶ್ಯಗಳು ನಮ್ಮ ಕಣ್ಣಿಕೆ ಕಾಣಿಸುತ್ತದೆ.


ಹೌದು, ಇದೇನಿದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಕೊರೊನಾ ವೈರಸ್ ಬರುವುದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ನಾವು ಧರಿಸುವ ಬಟ್ಟೆಗಳಿಗೆ ಕ್ವಾರಂಟೈನ್ ಅಂತಿರಾ ಅಂತಾ ಅಚ್ಚರಿ ಆಗುತ್ತಿದೆ ಅಲ್ವಾ..?
ಯಾಕೆಂದ್ರೆ ಇದು ನಿಜ. ನಾವು ಬೆಂಗಳೂರು ಸೇರಿ ದೇಶದ ಯಾವುದೇ ಮೂಲೆಯಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್​​ನ  ಪ್ರತಿಷ್ಠತ ಬಟ್ಟೆ ಮಳಿಗೆಗಳಿಗೆ ಹೋದ್ರೆ ನಿಮಗೆ ನಾವು ಹೇಳ್ತಿರುವುದು ನಿಜಾ ಅಂತಾ ಗೊತ್ತಾಗುತ್ತದೆ.


ಕೊರೊನಾ ಲಾಕಡೌನ ಬಳಿಕ ಬಟ್ಟೆ ಮಳಿಗೆಗಳು ಓಫನ್ ಆಗಿವೆ. ಹಾಗಂತ ಈ ಆದಿತ್ಯ ಬಿರ್ಲಾ ಗ್ರೂಪ್​ನ ಬಟ್ಟೆ ಮಳಿಗೆಗಳಿಗೆ ಹೋದ್ರೆ ಅಸಲಿ ವಿಚಾರ ಗೊತ್ತಾಗಲಿದೆ. ಈ ಮಳಿಗಳಿಗೆ ಒಳಗೆ ಕಾಲಿಡುವ ಮುನ್ನ ನಾವು ಮಾಸ್ಕ್ ಧರಿಸಲೇಬೇಕು. ಹ್ಯಾಂಡ್ ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನ್ ಮಾಡೇ ಮಾಡ್ತಾರೆ. ಮಳಿಗೆಯಲ್ಲಿ ಕಣ್ಣಿಗೆ ಇಷ್ಟವಾಗುವ ಬಟ್ಟೆಗಳನ್ನ ನಾವು ಟ್ರಯಲ್ ನೋಡಲು ಅವಕಾಶವಿಲ್ಲ.


ಯಾಕೆಂದ್ರೆ ಕೊರೊನಾ ಭಯದಿಂದ ಬಟ್ಟೆಗಳನ್ನ ಮುಟ್ಟುವಂತಿಲ್ಲ. ಆದ್ರೆ ನಾವು ನಮ್ಮ ಸೈಜ್ ಆಧಾರದ ಮೇಲೆ ಪ್ಯಾಂಟ್, ಶರ್ಟ್, ಸೂಟ್ಸ್ ಖರೀದಿ ಮಾಡಬೇಕು. ಅದರ ಬಿಲ್ಲಿಂಗ್ ಆಗಬೇಕು. ಆ ಬಳಿಕ ನಾವು ಅಲ್ಲಿ ಖರೀದಿ ಮಾಡಿರುವ ಬಟ್ಟೆಗಳನ್ನ ಧರಿಸಿ ಫಿಟ್ ಆಗಿ ಕುಳಿತಿದೇಯಾ ಅಂತ ನೋಡಬಹುದು. ಹಾಗೊಂದು ವೇಳೆ ನಾವು ಖರೀದಿಸಿದ ಬಟ್ಟೆ ನಮಗೆ ಫಿಟ್ ಆಗಿದ್ದರೆ ಏನು ಸಮಸ್ಯೆಯಿಲ್ಲ. ಆಗ ಸೈಜ್ ವ್ಯತ್ಯಾಸ ಆದ್ರೆ ಬೇರೆ ಶರ್ಟ್, ಪ್ಯಾಂಟ್ ತೆಗೆದುಕೊಳ್ಳಬೇಕಾಗುತ್ತದೆ. ಆಗ ನಾವು ಧರಿಸಿದ ಬಟ್ಟೆಯನ್ನ ಬೇರೆ ಸೈಜಿಗೆ ಎಕ್ಸೇಂಜ್ ಮಾಡ್ತಾರೆ. ಹೀಗೆ ಎಕ್ಸೇಂಜ್ ಮಾಡಿದ ಬಟ್ಟೆಯನ್ನ ನೇರವಾಗಿ ಕ್ವಾರಂಟೈನಗೆ ಕಳುಹಿಸಲಾಗುತ್ತದೆ.

ಬಟ್ಟೆಗಳ ಕ್ವಾರಂಟೈನ್​ಗಾಗಿಯೇ 4 ಪ್ರತ್ಯೇಕ ಬಾಕ್ಸ್​ಗಳನ್ನ ಮಾಡಲಾಗಿದೆ.  ಆಯಾ ದಿನಾಂಕದ ಅನುಸಾರವಾಗಿ ಆ  ಬಟ್ಟೆಯನ್ನ ಬಾಕ್ಸ್​ನಲ್ಲಿ ಇಡಲಾಗುತ್ತದೆ. ಹೀಗೆ ಬಾಕ್ಸ್​ನಲ್ಲಿ ಇಟ್ಟ ಬಟ್ಟೆಗಳು ಕ್ವಾರಂಟೈನ್​ನಲ್ಲಿದೆ ಅಂತಾ ತಿಳಿದುಕೊಳ್ಳಬೇಕು. ನಾಲ್ಕು ದಿನಗಳ ಬಳಕ ಮತ್ತೆ ಬಟ್ಟೆಯನ್ನ ಮಳಿಗೆಯಲ್ಲಿ ಡಿಸ್ಪ್ಲೇ ಮಾಡ್ತಾರೆ. ಬ್ರಾಂಡೆಡ್ ಅಂಗಡಿಗಳು ಗ್ರಾಹಕರ ಹಿತ ದೃಷ್ಟಿಯಿಂದ ಈ ನಿಯಮವನ್ನ ಪಾಲಿಸುತ್ತಿವೆ. ಯಾವುದೇ ಸೋಂಕು ತಗುಲಿದ ವ್ಯಕ್ತಿ ಧರಿಸಿದ ಬಟ್ಟೆ ಬೇರೆಯವರು ಧರಿಸಬಾರದು ಅನ್ನೋ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಕೊರೊನಾ ಫಜೀತಿ ಎಲ್ಲರಿಗೂ ಹೊಸ ಪಾಠ ಕಲಿಸುತ್ತಿದೆ. ಎಲ್ಲರಿಗೂ ಕ್ವಾರಂಟೈನ್​ ಅನ್ನುವ ನಿಯಮ ಈಗ ಬಟ್ಟೆಗಳಿಗೂ ಬಂದು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಅದ್ಯಾವುದಕ್ಕೆ ಕ್ವಾರಂಟೈನ್​ ಮಾಡ್ತಾರೋ ಕಾದು ನೋಡಬೇಕಿದೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ