ವೈರಲ್
ಒಂದೇ ದಿನ ಪುಷ್ಪ 71 ಕೋಟಿ ಕಲೆಕ್ಷನ್.! ನಿಜಾನಾ.?
![](https://risingkannada.com/wp-content/uploads/2021/12/71-ಪ.jpg)
ರೈಸಿಂಗ್ ಕನ್ನಡ :
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಿಡುಗಡೆಯಾದ ಮೊದಲ ದಿನವೇ 71 ಕೋಟಿ ರೂ. ಗಳಿಕೆ ಮಾಡಿದೆಯಂತೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಅಭಿನಯದ ಪುಷ್ಪ ಸಿನಿಮಾಗೆ ಬಿಡುಗಡೆಯಾದ ಮೊದಲ ದಿನವೇ ಮಿಕ್ಸ್ ರಿವೀವ್ಸ್ ಬಂದಿದ್ವು. ಸಿನಿಮಾಗೆ ಕೊಟ್ಟ ಹೈಪ್ ಗೂ ಸಿನಿಮಾ ಇರೋ ರೀತಿಗೆ ಸಂಬಂಧವೇ ಇಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯ್ತು.
ಆದ್ರೀಗ, ಎಲ್ಲರ ಲೆಕ್ಕಾಚಾರವನ್ನೇ ಪುಷ್ಪ ಸಿನಿಮಾ ಉಲ್ಟಾ ಮಾಡಿದೆ. ಡಿಸೆಂಬರ್ 17ರಂದು ಬಿಡುಗಡೆ ಆಗಿದ್ದ ಪುಷ್ಪ ಸಿನಿಮಾ, ವಿಶ್ವಾದ್ಯಂತ ಒಂದೇ ದಿನ ಬರೋಬ್ಬರಿ 71 ಕೋಟಿ ರೂ. ಗಳಿಕೆ ಮಾಡಿದೆ ಅಂತ ಸಿನಿಮಾ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಹೇಳಿದೆ. ಎಸ್, ಪುಷ್ಪ ಸಿನಿಮಾ ವಿಶ್ವಾದ್ಯಂತ ಮೊದಲ ದಿನ 71 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ತನ್ನ ಆಫೀಸಿಯಲ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. 2021 INDIA'S BIGGEST DAY 1 GROSSER 🔥#PushpaTheRise strikes big at the Box Office 💥
MASSive 71CR Gross Worldwide🤘#ThaggedheLe 🤙#PushpaBoxOfficeSensation @alluarjun @iamRashmika @aryasukku @ThisIsDSP @adityamusic @TSeries @PushpaMovie pic.twitter.com/FwRvqNVl7m
ವಿಶೇಷ ಅಂದ್ರೆ, ಪುಷ್ಪ ಸಿನಿಮಾ 2021ರಲ್ಲಿ ಬಿಡುಗಡೆಯಾದ ಭಾರತದ ಎಲ್ಲಾ ಸಿನಿಮಾಗಳ ದಾಖಲೆಯನ್ನ ಮುರಿದಿದೆ. ಈ ಹಿಂದೆ ತೆಲುಗಿನ ವಕೀಲ್ ಸಾಬ್, ತಮಿಳಿನ ಮಾಸ್ಟರ್, ಹಿಂದಿ ಸೂರ್ಯವಂಶಿ ಸಿನಿಮಾಗಳು ಕ್ರಮವಾಗಿ ಈ ವರ್ಷದ ಟಾಪ್ ಸ್ಥಾನದಲ್ಲಿದ್ವು. ಆ ಎಲ್ಲಾ ಸಿನಿಮಾಗಳ ಮೊದಲ ದಿನದ ಗಳಿಕೆಯನ್ನ ಪುಷ್ಪ ಸಿನಿಮಾ ಬ್ರೇಕ್ ಮಾಡಿದೆ.
ಇನ್ನೂ, ವಿಶೇಷ ಅಂದ್ರೆ, ಆಂಧ್ರ ಹಾಗೂ ತೆಲಂಗಾಣದಲ್ಲಿ ಬಾಹುಬಲಿ 2 ಮತ್ತು ಸಾಹೋ ಸಿನಿಮಾಗಳ ರೆಕಾರ್ಡ್ಸ್ ಕೂಡ ಪುಷ್ಪ ಬ್ರೇಕ್ ಮಾಡಿದೆ. ನೈಜಾಂ ಏರಿಯಾದಲ್ಲಿ ಮೊದಲ ದಿನವೇ 11 ಕೋಟಿಗೂ ಹೆಚ್ಚು ಶೇರ್ ಕಲೆಕ್ಷನ್ ಮಾಡುವ ಮೂಲಕ ಪುಷ್ಪ ಹೊಸ ದಾಖಲೆ ನಿರ್ಮಿಸಿದೆ.
ಇನ್ನು ಎರಡನೇ ದಿನವೂ ಪುಷ್ಪ ಸಿನಿಮಾ ಒಳ್ಳೇ ಕಲೆಕ್ಷನ್ ಮಾಡಿದ್ದು, ಎರಡನೇ ದಿನದಲ್ಲಿ 100 ಕೋಟಿ ಕ್ಲಬ್ಗೆ ಸೇರಿದೆ ಅನ್ನೋ ಮಾಹಿತಿ ಸಿಕ್ಕಿದೆ. ಆದ್ರೆ, ಅದು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಅದೇನೇ ಆಗ್ಲಿ, ತೆಲುಗು ಸೇರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆದ ಪುಷ್ಪ ಮಿಶ್ರಪ್ರತಿಕ್ರಿಯೆ ಮಧ್ಯೆಯೂ ಭರ್ಜರಿ ಕಲೆಕ್ಷನ್ ಮಾಡಿದೆ..
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?