Connect with us

ಜ್ಯೋತಿಷ್ಯ

ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಯಾರು ರಚಿಸಿದ್ದಾರೆ?

ಹೆಸರೇ ಹೇಳುವಂತೆ ಪುರಾಣಗಳು ಪುರಾಣಗಳೇ ಆಗಿವೆ ಇವುಗಳನ್ನು ಇತಿಹಾಸ ಎಂದು ಕರೆದಿಲ್ಲ. ಪುರಾಣಗಳು ಒಟ್ಟು ಹದಿನೆಂಟು ಇವೆ. ಹಾಗೆಯೇ ಹದಿನೆಂಟು ಉಪ ಪುರಾಣಗಳೂ ಇವೆಎನ್ನಲಾಗಿದೆ. ಒಂದೊಂದು ಪುರಾಣಗಳು ಒಂದೊಂದು ದೇವರನ್ನು ವೈಭವೀಕರಿಸಿ ರಚಿಸಲಾಗಿದೆ ಒಂದಕ್ಕೊಂದು ವಿರೋಧಾಭಾಸ ಇದೆ. ಪುರಾಣಗಳಲ್ಲಿ ಎಲ್ಲಾಗುಣಗಳ ಮಿಶ್ರಣ ಇದೆ.

ಪುರಾಣಗಳಲ್ಲಿನ ಉತ್ತಮ ಅಂಶವನ್ನು ಮಾತ್ರ ನಾವುಗ್ರಹಿಸುವ ಅಗತ್ಯವಿದೆ. ಹಲವು ದೇವರುಗಳಾದಮೇಲೆ ದೇವರಲ್ಲಿ ಹೆಚ್ಚುಕಡಿಮೆ ಉತ್ತಮ ಕನಿಷ್ಠ ಮುಂತಾಗಿ ತಾರತಮ್ಯ ಮಾಡಿಕೊಂಡು ಒಂದೊಂದು ದೇವರನ್ನು ಬೆಂಬಲಿಸಿ ಒಂದೊಂದು ಗುಂಪುಗಳು ಹುಟ್ಟಿಕೊಂಡವು ಹೀಗೆ ವಿಷ್ಣು ಆರಾಧಕರು, ಶಿವನ ಆರಾಧಕರು,ಶಕ್ತಿ ಆರಾಧಕರು , ಗಣಪತಿ ಆರಾಧಕರು, ಷಣ್ಮುಕನ ಆರಾಧಕರು ಮುಂತಾಗಿ ಹಲವು ಗುಂಪುಗಳಾಗಿ ಅವರುಗಳು ತಮ್ಮ ದೇವರೇ ಶ್ರೇಷ್ಠೆಂದು ಬಿಂಬಿಸುವ ಪುರಾಣಗಳನ್ನು ರಚಿಸಿಕೊಂಡರು. ಇವುಗಳೆಲ್ಲವನ್ನೂ ವ್ಯಾಸರೇ ಬರೆದಿದ್ದಾರೆ ಎಂದು ಪ್ರಚಾರ ಮಾಡಿಕೊಂಡಿದ್ದಾರೆ, ಯಾರು ಬರೆದಿದ್ದಾರೆ? ವ್ಯಾಸರಾದರೆ ಯಾವ ವ್ಯಾಸರು? ಮಹಾಭಾರತ ಬರೆದ ವೇದವ್ಯಾಸರೋ ಅಥವಾ ಅಧುನಿಕ ವ್ಯಾಸರೋ ಇವೆಲ್ಲಕ್ಕೂ ಉತ್ತರ ಕೊಡುವುದು ಕಷ್ಠ, ವಿರೋಧಾಭಾಸದ ಕೃತಿಯನ್ನು ಮಹಾಭಾರತ ಬರೆದ ವೇದವ್ಯಾಸರು ಬರೆದಿಲ್ಲ ಎಂದು ನಾವು ನಂಬಬಹುದು. (ಆದರೆ ಕೆಲವು ಸಂಪ್ರದಾಯವಾದಿಗಳು ವಿಮರ್ಷೆಯನ್ನು ಒಪ್ಪುವುದಿಲ್ಲ.) ಈ ಪುರಾಣಗಳ ರಚನೆ ನಂತರದ ಕಾಲಘಟ್ಟದಲ್ಲಿ ದೇವರಬೆಂಬಲಿಗರು ತಮ್ಮ ತಮ್ಮ ಇಷ್ಠದೈವದ ಕುರಿತಾಗಿ ರಚಿಸಿಕೊಂಡ ಕೃತಿಗಳೇ ಪುರಾಣಗಳೆನ್ನುವುದು ನಿಜವಾಗಿದೆ ಎನ್ನಬಹುದು. ಅನೇಕ ತೀರ್ಥ ಕ್ಷೇತ್ರಗಳಲ್ಲಿ ಸ್ಥಳಪುರಾಣ ರಚಿತವಾಗಿದೆ. ಪುರಾಣಗಳು ಪುರಾಣಿಕರಿಂದ ಪ್ರಚಾರಪಡೆಯಿತು.

Advertisement

ವೇದಗಳ ಕಾಲದಲ್ಲಿ ಪ್ರಕೃತಿಯ ರೂಪವಾದ ಅಥವಾ ಅದರ ಪ್ರತಿನಿಧಿಗಳಾದ ಇಂದ್ರ, ಅಗ್ನಿ, ವಾಯು, ವರುಣ, ಯಮ, ಮುಂತಾಗಿ ದೇವತೆಗಳಿದ್ದರು. ವೇದಾರ್ಥದಲ್ಲಿ ಈ ಎಲ್ಲಾಹೆಸರುಗಳೂ ಒಬ್ಬನೇ ಭಗವಂತನದ್ದಾಗಿದೆ. ಆದರೆ ಪುರಾಣಗಳಲ್ಲಿ ಇವುಗಳಿಗೆಲ್ಲಾ ವಿವಿಧ ರೂಪ ಪಾತ್ರ ಕೊಡಲಾಗಿದೆ. ನಂತರದಲ್ಲಿ ಶ್ರೀ ರಾಮ, ಶ್ರೀ ಕೃಷ್ಣ ಇವರುಗಳು ತಮ್ಮ ಮಾದರೀ ಆದರ್ಷ ಬದುಕಿನಿಂದಾಗಿ ದೈವತ್ವಕ್ಕೆ ಏರಿ ಅವತಾರಪುರುಷರೆನಿಸಿಕೊಂಡರು. ಪುರಾಣಗಳಿಂದಾಗಿ ಹಲವು ದೇವದೇವತೆಗಳು ಬೆಳಕಿಗೆ ಬಂದರು. ಇವುಗಳಲ್ಲಿ ವಿಷ್ಣು . ವಿಷ್ಣುವಿನ ಹೆಸರಿನಲ್ಲಿ ದಶಾವತಾರ, ನಂತರ ದೇವಿ ಅಕೆಯಹೆಸರಿನಲ್ಲಿ ಹಲವು ಅವತಾರರೂಪಗಳು ನವದುರ್ಗೆಯರು, ಶಿವ ಆತನ ಮಕ್ಕಳಾದ ಷಣ್ಮುಖ ಗಣಪತಿ ಮುಂತಾದವರು ದೇವರೆಂದು ಪೂಜೆಗೊಂಡರು ನಂತರದಲ್ಲಿ ದೇವರ ವಾಹನ ರೂಪಗಳಾದ ನಂದಿ ಶಿವನ ಆಭರಣವಾದ ನಾಗ, ರಾಮಭಕ್ತ ಹನುಮ ಎಲ್ಲರೂ ಪೂಜಿಸಲ್ಪಡತೊಡಗಿದರು. ಮುಂದುವರಿದು ಶೀವಗಳಣಗಳು, ಶನಿದೇವರು, ಮಾರಮ್ಮ, ಚೌಡಮ್ಮರೂ ಅಣ್ಣಮ್ಮ ಮುಂತಾಗಿ ದೇವರಾದರು, ಹಾಗೆಯೇ ನಂತರದಲ್ಲಿ ಚೌಡಿ ಭೂತಗಳಿಗೂ ಪೂಜೆಶುರುವಾಯಿತು ಹೀಗೆ ಸಂಸ್ಕೃತಿಯ ಉದಯ ಹಾಗೂ ವಿಕಸನವಾಯಿತು.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ