Connect with us

Featured

ಎಸ್ಪಿ ಸಂಗೀತಾ ವಿರುದ್ಧ ಕೊಪ್ಪಳದಲ್ಲಿ ಜನಾಕ್ರೋಶ – ಪಿಐ, ಪಿಸಿ ಅಮಾನತು ರದ್ದಿಗೆ ಆಗ್ರಹ

ರೈಸಿಂಗ್ ಕನ್ನಡ :

ಕೊಪ್ಪಳ :

ಪ್ರತಿನಿಧಿ :

ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚೆಗೆ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಅದರಲ್ಲೂ ನಗರ ಠಾಣೆಯ ಪಿಐ ಮೌನೇಶ್ವರ ಮಾಲೀಪಾಟೀಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಪ್ರಕಾಶ ತಿಮ್ಮಾಪುರ ಅವರನ್ನು ಅಮಾನತುಗೊಳಿಸಿರೋ ವಿಚಾರ ಈಗ ಎಲ್ಲಾ ಚರ್ಚೆಯಾಗುತ್ತಿದೆ.

Advertisement

ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್‌ಟೇಬಲ್  ಅಮಾನತು ಆದೇಶವನ್ನು ರದ್ದುಗೊಳಿಸಿ, ಅದೇ ಠಾಣೆಗೆ ಮತ್ತೇ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ‌  ಬಳಗ ಪ್ರತಿಭಟನೆ ನಡೆಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಖಾಸುಮ್ಮನೆ ಆರೋಪ ಹೊರಿಸಿ ನಗರ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಮೌನೇಶ್ವರ ಮಾಲೀಪಾಟೀಲ್ ಅವರು ವಿ3 ಕೇರ್ ಲೈಫ್ ಕೇರ್ ಕಂಪನಿಯ ಮೂರನೇ ಆರೋಪಿ ಪತ್ತೆಗೆ ಸಂಬಂಧಿಸಿದಂತೆ ಸುಮಾರು 45 ದಿನಗಳ ಕಾಲ ಹೈದ್ರಾಬಾದ್, ಕರ್ನೂಲ್, ಗುಜರಾತ್ ಸೇರಿದಂತೆ ದೇಶದ ಹಲವು ಕಡೆ ಸುತ್ತಾಡಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಈ ವಿಷಯ ಎಸ್ಪಿಗೆ ಗೊತ್ತಿರಲಿಲ್ಲವೇ? ಅಷ್ಟೆಲ್ಲಾ ರಾಜ್ಯ ಸುತ್ತಾಡಿ ಬಂದರೂ ಸಿಗದ ಆರೋಪಿ ಕೇವಲ ಒಂದೇ ದಿನದಲ್ಲಿ ಎಸ್ಪಿ ಸಂಗೀತ ನೇತೃತ್ವದ ತಂಡಕ್ಕೆ ಸಿಕ್ಕಿದ್ದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಶಿಖಾ ಶೇಖ್ ಪ್ರಕರಣದ ತನಿಖೆಯೇ ಮುಳುವಾಯಿತೇ?

ಕೊಪ್ಪಳ ಜಿಲ್ಲೆಯಲ್ಲಿ ಆಗಿನ್ನೂ ಕೊರೊನಾ ಕೇಸ್‌ಗಳಿರಲಿಲ್ಲ. ಲಾಕ್‌ಡೌನ್ ಇದ್ದರೂ ಮುಂಬೈ ಮೂಲದ ಯುವತಿಯನ್ನು ಭಾಗ್ಯನಗರದ ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ಪೊಲೀಸ್ ವಾಹನದಲ್ಲೇ ಕೊಪ್ಪಳಕ್ಕೆ ಕರೆ ತಂದಿದ್ದ. ಆಕೆಯನ್ನು ಮರಳಿ ಮುಂಬೈಗೆ ಕಳಿಸಲು ನೇರವಾಗಿ ಡಿಸಿಯವರ ಬಳಿ ಪಾಸ್ ಕೇಳಲು ಹೋದಾಗ ದಕ್ಷ ಜಿಲ್ಲಾಧಿಕಾರಿ ಚಾಟಿ ಬೀಸಿ, ಪ್ರಕರಣ ದಾಖಲಿಸಲು ಸೂಚಿಸಿ, ಹೊಳಗುಂದಿಯನ್ನು ಕಂಬಿ ಹಿಂದೆ ತಳ್ಳಿದ್ದರು.

ನಿತ್ಯ ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಗುರು ಬಸವರಾಜ ಹೊಳಗುಂದಿ ಎಸ್ಪಿಯವರ ಹಾಗೂ ಕೆಲ ರಾಜಕೀಯ ಮುಖಂಡರ ಕೃಪಾಕಟಾಕ್ಷದಿಂದ ಸೇಫ್ ಆಗಿದ್ದ. ಆದರೆ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಮೌನೇಶ್ವರ ಮಾಲೀಪಾಟೀಲ್ ನಿಷ್ಪಕ್ಷಪಾತವಾಗಿ ಮಾಹಿತಿ ಸಂಗ್ರಹಿಸುತ್ತಿದ್ದುದು ಎಸ್ಪಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ, ಯಾವುದೋ ಹಳೇ ಪ್ರಕರಣದ ತನಿಖೆ ಕಾರಣ ನೀಡಿ ಅಮಾನತು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೆಲ್ಲ ಪ್ರಭಾವಿ ಗುರುಬಸವರಾಜ ಹೊಳಗುಂದಿಯನ್ನು ಸೇಫ್ ಮಾಡುವ ತಂತ್ರ. ಇದುವರೆಗೂ ಶಿಖಾ ಶೇಖ್ ಎಲ್ಲಿದ್ದಾಳೆ? ಆ ಪ್ರಕರಣ ಏನಾಯಿತು? ಎಂಬುದನ್ನು ಮೊದಲು ಬಯಲು ಮಾಡಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೂಡಲೇ ಪೊಲೀಸ್ ಕಾನ್ಸ್‌ಟೇಬಲ್ ಪ್ರಕಾಶ್ ತಿಮ್ಮಾಪುರ ಮತ್ತು ಪಿಐ ಮೌನೇಶ್ವರ ಮಾಲೀಪಾಟೀಲ್ ಅವರನ್ನು ಅದೇ ಠಾಣೆಗೆ ಸ್ಥಳ ನಿಯುಕ್ತಿ ಮಾಡಬೇಕು. ಇಲ್ಲದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ ಬಳಗದ ಮುಖಂಡರು ಎಚ್ಚರಿಸಿ ಎಸ್ಪಿ ಸಂಗೀತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ್ ಕುಕನೂರು, ಸುನೀಲ್ ಹೆಸರೂರು, ವೆಂಕಟೇಶ ಹವಳೆ, ಬಸವರಾಜ ಭೋವಿ, ಗವಿಸಿದ್ದಪ್ಪ ಗೊರವರ, ಶೇಖರ್ ಎಸ್.ಪಾಟೀಲ, ಲಿಂಗರಾಜ ಕಟ್ಟೀಮನಿ, ಮಂಜು ತೋಟಗೇರ, ಸುರೇಶ ಬನ್ನಿಕೊಪ್ಪ, ರುದ್ರಗೌಡ ಸೊಲಬಗೌಡ್ರ, ಪ್ರವೀಣಗೌಡ್ರ, ಮಾರುತಿ ಆಪ್ಟೆ, ಸಿದ್ದು ಮೈನಳ್ಳಿ ಸೇರಿದಂತೆ ಇತರರು ಇದ್ದರು.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ