ಕಾಫಿ ಮತ್ತು ಟೀ.. ಮನುಕುಲದಲ್ಲಿ ಸಾಕಷ್ಟು ಜನಪ್ರಿಯ ಪೇಯ. ಯಾವುದೇ ದೇಶಕ್ಕೆ ಹೋದ್ರೂ ಕಾಫಿ ಅಥವಾ ಟೀ ಸಿಕ್ಕೇ ಸಿಗುತ್ತದೆ. ಕೆಲವರಿಗೆ ಇದು ಚಟವಾಗಿ ಬಿಟ್ಟಿದೆ. ಕಾಫಿ, ಟೀ ಕುಡಿಯದೇ ಇದ್ದರೆ ಹುಚ್ಚರಂತಾಗುತ್ತಾರೆ.
Advertisement
ಕಾಫಿ ಮತ್ತು ಟೀನಲ್ಲಿ ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವೂ ಇದೆ. ಹಸಿದ ಹೊಟ್ಟೆಯಲ್ಲಿ ಟೀ-ಕಾಫೀ ಕುಡಿಯುವುದು ಅಪಾಯ ಎನ್ನುತ್ತದೆ ವಿಜ್ಞಾನ. ಮುಂಜಾನೆ ಎದ್ದಾಕ್ಷಣ ಟೀ ಕುಡಿದರೆ ಹೊಟ್ಟೆಯಲ್ಲಿರುವ ರಾಸಾಯನಿಕ ಹಾಗೂ ಆಮ್ಲಗಳಲ್ಲಿ ಏರು ಪೇರಾಗುತ್ತದೆ. ಹಸಿದ ಹೊಟ್ಟೆಯಲ್ಲಿ ನಿರಂತರವಾಗಿ ಟೀ ಕುಡಿಯುವುದರಿಂದ ಆಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡಬಹುದು.
ಮುಂಜಾನೆ ಹಸಿದ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ. ಟೀನಲ್ಲಿರುವ ಥಿಯೋಫಿಲಿನ್ ಮಲವನ್ನು ಗಟ್ಟಿ ಮಾಡಿ ಬಿಡುತ್ತದೆ.
Advertisement
ಮುಂಜಾನೆ ಟೀ ಕುಡಿಯುವುದರಿಂದ ದೇಹ ಇತರ ಪೋಷಕಾಂಶ ಹೀರಿಕೊಳ್ಳುವುದನ್ನು ತಡೆಯುತ್ತದೆ. ಟೀನಲ್ಲಿ ನಿಕೋಟಿನ್ ಮಾದರಿಯ ಅಂಶಗಳು ಇರುತ್ತವೆ. ಇದು ಅಡಿಕ್ಷನ್ಗೆ ಕಾರಣವಾಗಬಹುದು.
Advertisement
ಟೀ ಸಿಗದೇ ಇದ್ದಾಗ ದೊಡ್ಡ ಸಮಸ್ಯೆ ಎದುರಾಗಬಹುದು. ಟೀ-ಕಾಫಿ ಕಂಟ್ರೋಲ್ನಲ್ಲಿ ಕುಡಿದರೆ ಅಭ್ಯಾಸ. ಆದ್ರೆ ಅತೀ ಹೆಚ್ಚಾಗಿ ಕುಡಿದರೆ ದುರಾಭ್ಯಾಸ.