ಸಿನಿಮಾ
ದೇವಸ್ಥಾನಕ್ಕೆ ರೋಬೋ ಆನೆಯನ್ನೇ ಉಡುಗೊರೆಯಾಗಿ ನೀಡಿದ ಪ್ರಿಯಾಮಣಿ
Cinema : ಬಹುಭಾಷಾ ನಟಿ ಪ್ರಿಯಾಮಣಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇದೀಗ ದೇವಸ್ದಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆಯಾಗಿ ನೀಡಿದ್ದಾರೆ.
ನಟಿ ಪ್ರಿಯಾಮಣಿ ಅವರು ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಅನ್ನು ನೀಡಿದ್ದಾರೆ. ಗಾತ್ರ ಹಾಗೂ ಎತ್ತರದಲ್ಲಿ ಮೆಕ್ಯಾನಿಕಲ್ ಎಲಿಫೆಂಟ್, ನಿಜವಾದ ಆನೆಯನ್ನು ಮೀರಿಸುವಂತಿದೆ. ಈ ಆನೆ ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ಪ್ರಾಣಿ ಪ್ರೇಮಿಗಳ ಸಂಘಟನೆಯಾದ ಪೇಟಾ ಮತ್ತು ಪ್ರಿಯಾಮಣಿ ಜಂಟಿಯಾಗಿ ಈ ಕೆಲಸ ಮಾಡಿದೆ. ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಕೊಡುಗೆಯಾಗಿ ನೀಡಿದ್ದಾರೆ. ಪ್ರಿಯಾಮಣಿ ಕೆಲಸವನ್ನು ಅನೇಕರು ಕೊಂಡಾಡಿದ್ದಾರೆ.
ಕೇರಳ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಜೀವಂತ ಆನೆಗಳನ್ನು ದೇವರ ಸೇವೆಗೆಂದು ಬಳಸಲಾಗುತ್ತದೆ. ಆದ್ರೆ ಕೇರಳ ಮಹಾದೇವನ ದೇವಾಲಯ ಆಡಳಿತ ಮಂಡಳಿ ನಿಜವಾದ ಆನೆಗಳನ್ನು ಬಳಸೋದು ಬೇಡ, ಗುತ್ತಿಗೆ ಪಡೆಯೋದು ಬೇಡ ಎಂಬ ನಿರ್ಧಾರ ಮಾಡಿದೆಯಂತೆ.
ದೇವಸ್ಥಾನದ ಈ ನಿರ್ಧಾರ ಮೆಚ್ಚಿದ ಪೇಟಾ ಸಂಘಟನೆ ಹಾಗೂ ಪ್ರಿಯಾಮಣಿ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆ ನೀಡಿದ್ದಾರೆ. ಮಹದೇವನ್ ಎಂಬ ಹೆಸರಿನ ಆನೆಯನ್ನು ದೇವಾಲಯದ ಸಮಾರಂಭಗಳನ್ನು ಕ್ರೌರ್ಯ ಮುಕ್ತವಾಗಿ, ಸುರಕ್ಷಿತ ರೀತಿಯಲ್ಲಿ ಬಳಸಲಾಗುವುದು ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಕ್ಯಾನಿಕಲ್ ಎಲಿಫೆಂಟ್ ಅನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿರುವುದು ಸಂತಸ ತಂದಿದೆ ಎಂದು ಪ್ರಿಯಾಮಣಿ ತಿಳಿಸಿದ್ದಾರೆ. ಭಕ್ತರು ಸುರಕ್ಷಿತವಾಗಿ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಬಹುದು ಎಂದು ನಟಿ ತಿಳಿಸಿದ್ರು.
ಮನುಷ್ಯರಂತೆ ತಮ್ಮ ಕುಟುಂಬದೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುವ ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳ ಗೌರವಾರ್ಥವಾಗಿ ಮೆಕ್ಯಾನಿಕಲ್ ಆನೆಯನ್ನು ದೇವರ ಕಾರ್ಯಕ್ಕೆ ಬಳಸಲು ತುಂಬಾ ಸಂತೋಷವಾಗಿದೆ ಎಂದು ತಿರಿಕೈಲ್ ಮಹಾದೇವ ದೇವಸ್ಥಾನದ ಮಾಲೀಕ ತೇಕಿನ್ಯೇದತ್ ವಲ್ಲಭನ್ ನಂಬೂತಿರಿ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?