Featured
ಕೆಜಿಎಫ್ 2ನಲ್ಲಿ ಮತ್ತೊಂದು ಅಚ್ಚರಿ! – ಅನಂತ್‌ನಾಗ್ ಗೆಟಪ್‌ನಲ್ಲಿ ಪ್ರಕಾಶ್ ರೈ!
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಕೆಜಿಎಫ್ 2 ಈಗ ಕೇವಲ ಕನ್ನಡ ಚಿತ್ರವಾಗಿ ಉಳಿದಿಲ್ಲ. ವಿಶ್ವಾದ್ಯಂತ ಅದರ ಬೇಡಿಕೆ ಹೆಚ್ಚಿಸಿದೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲೂ ಅದರ ಹವಾ ಜೋರಾಗಿದೆ. ಅದ್ರಲ್ಲೂ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಮತ್ತು ರವೀನಾ ಟಂಡನ್ ಚಿತ್ರತಂಡ ಸೇರಿಕೊಂಡ ಮೇಲಂತೂ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಇದೀಗ ಚಿತ್ರಕ್ಕೆ ಮತ್ತೊಬ್ಬ ಬಹುಭಾಷಾ ನಟ ಸೇರಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರಾಜ್ ಇರೋ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೌದು, ಪ್ರಕಾಶ್ ರಾಜ್ ಇಂದಿನಿಂದ ಕೆಜಿಎಫ್ 2 ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ.
ಅಚ್ಚರಿ ಎಂದರೆ, ಅನಂತ್‌ನಾಗ್ ಕೆಜಿಎಫ್ ಮೊದಲ ಅಧ್ಯಾಯದಲ್ಲಿ ಯಾವ ಗೆಟಪ್ನಲ್ಲಿದ್ದರೋ ಅದೇ ಗೆಟಪ್ನಲ್ಲೇ ಪ್ರಕಾಶ್ ರಾಜ್ ಕೂತಿದ್ದಾರೆ. ಸಿನಿಮಾ ತಂಡದಿಂದ ಅನಂತ್ ನಾಗ್ ಹೊರ ಹೋಗಿದ್ದಾರೆ ಅನ್ನೋ ವಿಚಾರಕ್ಕೆ ಈ ಫೋಟೋ ಮತ್ತಷ್ಟು ಪುಷ್ಟಿ ನೀಡಿದೆ.
ಕೆಜಿಎಫ್ ಮೊದಲ ಚಾಪ್ಟರ್ ನಲ್ಲಿ ರಾಕಿ ಭಾಯ್ ಯಾರು? ಅವರ ಹಿನ್ನೆಲೆ ಏನು ಎನ್ನುವ ಕಥೆಯನ್ನು ಅನಂತ್ ನಾಗ್ ಹೇಳುತ್ತಾರೆ. ಹಿರಿಯ ಪತ್ರಕರ್ತರಾಗಿ ಅನಂತ್ ನಾಗ್ ಕಾಣಿಸಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರ ನಡೆದಿದ್ದರು ಎನ್ನುವ ವಿಚಾರ ಹರಿದಾಡಿತ್ತು.
ಆದ್ರೀಗ ಈ ಕುರಿತು ಸ್ಪಷ್ಟನೆ ನೀಡಿರೋ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ 2ನಲ್ಲೂ ಅನಂತ್ ನಾಗ್ ಮತ್ತು ಪ್ರಕಾಶ್ ರೈ ಇಬ್ಬರೂ ಇರಲಿದ್ದಾರೆ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?