Featured
ಗೋವಾದಲ್ಲಿ ಪತ್ನಿ ಪ್ರೇರಣಾ ಜೊತೆ ಧ್ರುವ ಸರ್ಜಾ : ಜಾಲಿ ಮೂಡ್ನಲ್ಲಿ ಪ್ರಣಯ ಪಕ್ಷಿಗಳು

ಗೋವಾ :
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ಗುಂಗಿನಲ್ಲಿದ್ದಾರೆ. ಹಲವು ವಿವಾದಗಳ ಬಳಿಕ ಪೊಗರು ಸಿನಿಮಾ ಯಾವುದೇ ಟೆನ್ಷನ್ ಇಲ್ಲದೆ, ಥಿಯೇಟರ್ನಲ್ಲಿ ರನ್ ಆಗ್ತಿದೆ. ಇದೇ ಖುಷಿಯಲ್ಲಿರೋ ಧ್ರುವ ಈಗ ಗೋವಾ ಬೀಚ್ನಲ್ಲಿ ಸಖತ್ ಜೋಶ್ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ.
ಯೆಸ್, ಪತ್ನಿ ಪ್ರೇರಣಾ ಜೊತೆ ಗೋವಾಗೆ ಜಾಲಿ ಟ್ರಿಪ್ ಹೋಗಿದ್ದಾರೆ ಧ್ರುವ ಸರ್ಜಾ. ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾದಲ್ಲೇ ಬ್ಯುಸಿಯಿದ್ದವರು ಧ್ರುವಾ. ಹೀಗಾಗಿ ಕುಟುಂಬದವರಿಗೆ ಟೈಮ್ ಕೊಡಲು ಆಗಿರಲಿಲ್ಲ. ಅದ್ರಲ್ಲೂ ಪ್ರೇರಣಾ ಜೊತೆ ಮದ್ವೆ ಆದ ಮೇಲೂ ಎಲ್ಲೂ ಹೊಗಿರಲಿಲ್ಲ. ಹೀಗಾಗಿ, ಎಲ್ಲಾ ಟೆನ್ಷನ್ಗಳಿಗೆ ಬ್ರೇಕ್ ಹಾಕಿ, ಸದ್ಯ ಗೋವಾದಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ ಧ್ರುವ ಮತ್ತು ಪ್ರೇರಣಾ.
ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಜಾಲಿ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿವೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?