ನವದೆಹಲಿ :
ದೇಶಾದ್ಯಂತ 2ನೇ ಹಂತದ ಕೊರೋನಾ ವ್ಯಾಕ್ಸಿನ್ ಲಸಿಕೆ ಅಭಿಯಾನ ಶುರುವಾಗಿದೆ. ಅಚ್ಚರಿ ಎನ್ನುವಂತೆ ಮಾರ್ಚ್ 1ರ ಸೋಮವಾರ ಬೆಳಗ್ಗೆಯೇ ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಶಾಕ್ ಕೊಟ್ಟಿದ್ರು. ಯಾಕಂದ್ರೆ, ಬೆಳಗ್ಗೆಯೇ ಮೋದಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡ್ರು. ಈ ಮೂಲಕ ಕೋವ್ಯಾಕ್ಸಿನ್ ಸೇರಿದಂತೆ ಕೊರೋನಾ ಲಸಿಕೆ ಸಾಕಷ್ಟು ಸುರಕ್ಷಿತ ಅನ್ನೋದನ್ನ ದೇಶವಾಸಿಗಳಿಗೆ ಸಾರಿ ಹೇಳಿದ್ರು.
ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಖುಷಿಯನ್ನ ಹಂಚಿಕೊಂಡಿದ್ದಾರೆ. ತಾನು ತನ್ನ ಮೊದಲ ಕೋವಿಡ್ ಲಸಿಕೆಯನ್ನ ದೆಹಲಿಯ ಏಮ್ಸ್ನಲ್ಲಿ ಪಡೆದುಕೊಂಡಿದ್ದೇನೆ. ನಮ್ಮ ವೈದ್ಯರು, ವಿಜ್ಞಾನಿಗಳು ಎಷ್ಟು ಬೇಗ ಕೊರೋನಾ ವ್ಯಾಕ್ಸಿನ್ ಕಂಡುಹಿಡಿದ್ದಾರೆ ಅನ್ನೋದು ನಿಜಕ್ಕೂ ದೊಡ್ಡ ಸಾಧನೆ ಎಂದು ಮೋದಿ ಹೊಗಳಿದ್ದಾರೆ.
ಇಷ್ಟೇ ಅಲ್ಲದೆ, ಎಲ್ಲರೂ ಕೂಡ ಧೈರ್ಯವಾಗಿ, ಯಾವುದೇ ಅಂಜಿಕೆ, ಅಳುಕು ಇಲ್ಲದೆ ಕೊರೋನಾ ಲಸಿಕೆ ಪಡೆಯಿರಿ. ಆ ಮೂಲಕ ಭಾರತವನ್ನ ಕೊರೋನಾ ಮುಕ್ತ ರಾಷ್ಟ್ರ ಮಾಡೋಣ ಎಂದು ದೇಶದ ಜನತೆಗೆ ಮೋದಿ ಕರೆ ನೀಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?