Featured
ರಾತ್ರಿ 8 ಗಂಟೆಯಿಂದ ಅಮೆರಿಕಾದ ಹೌಡಿಯಲ್ಲಿ ಮೋದಿ ಹವಾ : ಟ್ರಂಪ್ ಕೂಡ ಭಾಗಿ..!

ರೈಸಿಂಗ್ ಕನ್ನಡ : ಪ್ರಧಾನಿ ನರೇಂದ್ರ ಮೋದಿ ಒಂದು ವಾರಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇವತ್ತು ಹೂಸ್ಟನ್ನಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಟೆಕ್ಸಾಸ್ ರಾಜ್ಯದ ಹೂಸ್ಟನ್ನಲ್ಲಿ 50ಕ್ಕೂ ಹೆಚ್ಚು ಭಾರತೀಯರನ್ನ ಉದ್ದೇಶಿಸಿ ರಾತ್ರಿ 10 ಗಂಟೆಗೆ ಮೋದಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಅತೀ ಹೆಚ್ಚು ಜನರನ್ನ ಉದ್ದೇಶಿಸಿ ಭಾಷಣ ಮಾಡಿದ ಮೊದಲ ವಿದೇಶಿ ಜನಪ್ರತಿನಿಧಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದು, ಹೊಸ ಇತಿಹಾಸ ಬರೆಯಲಿದ್ದಾರೆ.
ಹೌಡಿಯಲ್ಲಿ ಏನೆಲ್ಲಾ ವಿಶೇಷ..?
- 50 ಸಾವಿರ ಜನ ಮೋದಿ ಸಮಾವೇಶಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
- ಭಾರತೀಯ ಮೂಲದ 400 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
- ಒಟ್ಟು 6000 ಮಂದಿ ಗರ್ಬಾ ನೃತ್ಯ ಪ್ರದರ್ಶನ ಮಾಡಿ, ಮೋದಿಗೆ ಸ್ವಾಗತ
- ರಾತ್ರಿ 8.30ಕ್ಕೆ ಹೌಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ
- ಬರೋಬ್ಬರಿ 90 ನಿಮಿಷಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ
- ರಾತ್ರಿ 9.30ಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣೆ
- ರಾತ್ರಿ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾಷಣ
- ಹೌಡಿ ಮೋದಿ ಸಮಾವೇಶಕ್ಕೆ ಬರೋಬ್ಬರಿ 600 ಸಂಘಟನೆಗಳ ಆಯೋಜನೆ
- ಮೋದಿ ರ್ಯಾಲಿಯಲ್ಲಿ 1000 ಸ್ವಯಂ ಸೇವಕರು ಭಾಗಿ
- ಹೂಸ್ಟನ್ನಲ್ಲಿ ಕಾರ್ ರ್ಯಾಲಿ ಆಯೋಜನೆ, 200ಹೆಚ್ಚು ಕಾರುಗಳು ಭಾಗಿ
ಬರೋಬ್ಬರಿ 3 ಗಂಟೆಗಳ ಕಾರ್ಯಕ್ರಮ ಇದಾಗಿದ್ದು, ಮೋದಿಯನ್ನ ಸ್ವಾಗತಿಸಲು ಹೂಸ್ಟನ್ನ ಎನ್ಆರ್ಜಿ ಫುಟ್ಬಾಲ್ ಸ್ಟೇಡಿಯಂ ಸಜ್ಜಾಗಿದೆ. ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗಿ ಆಗ್ತಿರೋದು ಇಡೀ ವಿಶ್ವದ ಗಮನ ಸೆಳೆದಿದೆ.
ಮೋದಿ ವಿರುದ್ಧ ಪ್ರಕರಣ..!
ಯೆಸ್, ಒಂದೆಡೆ ಇಡೀ ವಿಶ್ವ ಹೌಡಿ ಮೋದಿ ಕಾರ್ಯಕ್ರಮಕ್ಕೆ ಎದುರು ನೋಡ್ತಿದ್ರೆ, ಮತ್ತೊಂದೆಡೆ ಹೂಸ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಮೋದಿ ವಿರುದ್ಧ ಹೂಸ್ಟನ್ನಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಅದೇನೇ ಇರಲಿ, ಇಡೀ ವಿಶ್ವವೇ ಮೋದಿಯ ಹೌಡಿ ಸಮಾವೇಶಕ್ಕಾಗಿ ಎದುರು ನೋಡ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?