Featured
ರೈತರ ಆದಾಯಕ್ಕೆ ಬರೆ ಹಾಕ್ತಾರಾ ಪ್ರಧಾನಿ ಮೋದಿ..? ವಿವಾದಿತ ಒಪ್ಪಂದಕ್ಕೆ ನಾಳೆ ಸಹಿ..?

ರೈಸಿಂಗ್ ಕನ್ನಡ : ಇಡೀ ದೇಶಾದ್ಯಂತ RCEP ಒಪ್ಪಂದಕ್ಕೆ ವಿರೋಧ ವ್ಯಕ್ತವಾಗ್ತಿದೆ. ಸ್ವತಃ ಬಿಜೆಪಿ ನಾಯಕರೇ ಈ ಒಪ್ಪಂದ ಬೇಡ ಅಂತಿದ್ದಾರೆ. ಆದ್ರೆ, ಅದ್ಯಾಕೋ ಏನೋ, ಪ್ರಧಾನಿ ನರೇಂದ್ರ ಮೋದಿ ಮಾತ್ರ RCEP ಒಪ್ಪಂದದ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಇದರಿಂದ ದೇಶದ ರೈತರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತೆ.
ಯೆಸ್, ನಾಳೆಯಿಂದ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಆಸಿಯಾನ್ ಶೃಂಗಸಭೆ ನಡೆಯಲಿದೆ. ಈಗಾಗಲೇ ಪ್ರಧಾನಿ ಮೋದಿ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಈ ಸಭೆಯಲ್ಲಿ ಮುಕ್ತವ್ಯಾ ಪಾರ ನೀತಿಯ ಚರ್ಚೆ ನಡೆಯಲಿದೆ. RCEP ಒಡಂಬಡಿಕೆಗೆ ಹಲವು ರಾಷ್ಟ್ರಗಳ ಒಪ್ಪಿಗೆ ಸಿಕ್ಕಿದ್ದು, ಬಹುತೇಕ ನಾಳೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಹಿ ಹಾಕುವ ಸಾಧ್ಯತೆ ಇದೆ.
ಒಂದು ವೇಳೆ ಪ್ರಧಾನಿ ಮೋದಿ ಈ ವಿವಾದಿತ RCEP ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದಲ್ಲಿ, ದೇಶದ ರೈತರ ಆದಾಯಕ್ಕೆ ಮತ್ತಷ್ಟು ಕೊಡಲಿ ಪೆಟ್ಟು ಬೀಳಲಿದೆ. ಇದರಿಂದಾಗಿ, ದೇಶದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ಒಪ್ಪಂದಕ್ಕೆ ಸಹಿಹಾಕಿದ್ರೆ ಸುಮಾರು ೧೦ ಕೋಟಿ ರೈತರು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಪ್ರಮುಖವಾಗಿ ಹಾಲಿನ ಉತ್ಪಾದನೆ ಮೇಲೆ ಭಾರಿ ಹೊಡೆತ ಬೀಳಲಿದೆ. ಹೈನುಗಾರಿಕೆಯ ಮೇಲೆಯೇ ಭಾರತದಲ್ಲಿ ಸುಮಾರು 10 ಕೋಟಿ ಕುಟುಂಬಗಳು ನಿಂತಿವೆ.
ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಯಾವ ನಿರ್ಧಾರ ಕೈಗೊಳ್ತಾರೆ..? ವಿವಾದಿತ ಒಪ್ಪಂದಕ್ಕೆ ಸಹಿ ಹಾಕ್ತಾರಾ..? ರೈತರ ಪರ ನಿಲ್ತಾರಾ..? ಅಥವಾ ರೈತ ವಿರೋಧ ಧೋರಣೆ ತೋರ್ತಾರಾ ಅನ್ನೋದು ಶೀಘ್ರವೇ ಗೊತ್ತಾಗಲಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















