Featured
ಕೊಪ್ಪಳದಲ್ಲಿ ಭಾರೀ ಮಳೆ: ಅಪಾಯ ಲಕ್ಕಿಸದೇ ಹಳ್ಳ ದಾಟುತ್ತಿರುವ ಜನರು
ರೈಸಿಂಗ್ ಕನ್ನಡ:
ಕೊಪ್ಪಳ:
ಭಾರೀ ಮಳೆಯಾಗುತ್ತಿರುವ ಕೊಪ್ಪಳದಲ್ಲಿ ಸಾಕಷ್ಟು ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಸತತ ಮಳೆಯಿಂದಾಗಿ ಇಲ್ಲಿನ ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ. ಎರಡು ಗ್ರಾಮಗಳ ಜನರಿಗೆ ಹಳ್ಳದ ದಾರಿ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಆದರೆ ಸತತ ಮಳೆಯಿಂದ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದು, ಜನರು ಅಪಾಯವನ್ನು ಲೆಕ್ಕಿಸದೇ ಸಂಚರಿಸುತ್ತಿದ್ದಾರೆ.
ಜಾಹೀರಾತು
ತಾಯಿಯೊಬ್ಬರು ಮಗುಸಮೇತ ಹಳ್ಳದ ಮತ್ತೊಂದು ದಡಕ್ಕೆ ಹೋಗಬೇಕಿತ್ತು. ಆದರೆ ಹರಿಯುತ್ತಿರುವ ಹಳ್ಳದ ನೀರನ್ನು ಕಂಡು ದಿಕ್ಕು ತೋಚದಂತಾಗಿ ನಿಂತಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ತಾಯಿ ಮತ್ತು ಮಗುವನ್ನು ಎತ್ತಿಕೊಂಡು ದಡಕ್ಕೆ ತಲುಪಿಸಿದ್ದಾರೆ. ಹಳ್ಳದಲ್ಲಿ ಹೋಗುವಾಗ ಮಗು ಹೊತ್ತಿದ್ದ ವ್ಯಕ್ತಿ ಆಯತಪ್ಪಿದ ಕ್ಷಣದ ವಿಡಿಯೊ ಮೈಜುಮ್ಮೆನಿಸುವಂತಿದೆ.
ಈ ಸ್ಥಳದಲ್ಲಿ ಎತ್ತರದ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?