Featured
ಕೋವಿಡ್19 ಗೈಡ್ಲೈನ್ಸ್ ಲೆಕ್ಕಕ್ಕೇ ಇಲ್ಲ- ಪೊಲೀಸರ ಎದುರೇ ಗೇಟ್ ಮುರಿದು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಿದ ಭಕ್ತರು

ರೈಸಿಂಗ್ ಕನ್ನಡ:
ನಾಗರಾಜ್.ವೈ.ಕೊಪ್ಪಳ:
ಕೊರೊನಾ ಕಟ್ಟಿಹಾಕಲು ಸರ್ಕಾರ ಹಲವು ಮಾರ್ಗಸೂಚಿಗಳನ್ನು ಮಾಡಿದೆ. ಅದರಲ್ಲಿ ಜಾತ್ರೆ, ಪಲ್ಲಕ್ಕಿ ಉತ್ಸವಗಳಿಗೆ ನಿಷೇಧವಿದೆ. ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಕೋವಿಡ್19 ಮಾರ್ಗಸೂಚಿಯನ್ನು ಲೆಕ್ಕಿಸದೆ ನೂರಾರು ಜನರು ಅಡ್ಡಪಲ್ಲಕ್ಕಿ ಉತ್ಸವ ನಡೆಸಿದ್ದಾರೆ.
ಸುಕುಮುನಿ ತಾತಾನವರ ಅಡ್ಡಪಲ್ಲಕ್ಕಿ ಉತ್ಸವ ಕೋವಿಡ್19 ಮಾರ್ಗಸೂಚಿ ಲೆಕ್ಕಿಸದೇ ನಡೆದಿದೆ. ಭಕ್ತರು ಪೊಲೀಸರ ಎದುರೇ ಮಠದ ಗೇಟ್ ಮುರಿದು ಅಡ್ಡಪಲ್ಲಕ್ಕಿ ಹೊರ ತಂದಿದ್ದಾರೆ. ಅಡ್ಡಪಲ್ಲಕ್ಕಿಯಿಂದ ಪೊಲೀಸ್ ಜೀಪ್ಗೂ ಡಿಕ್ಕಿ ಹೊಡೆದಿರೋ ಭಕ್ತರ ಗುಂಪು ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ನು ಗಾಳಿಗೆ ತೂರಿದೆ.ನಿರ್ಬಂಧದ ನಡುವೆಯೂ ಮಠದ ಮುಂದೆ ಸೇರಿದ ಭಕ್ತರ ಗುಂಪು ಸರ್ಕಾರಿ ನಿಯಮಗಳನ್ನೇ ಗಾಳಿಗೆ ತೂರಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.
You may like
ಸಜ್ಜನಿಕೆಯ ರಾಜಕಾರಣಿ ಪ್ರಭಾಕರ್ ಚಿಣಿಗೆ ಪುರುಷೋತ್ತಮಾನಂದ ಶ್ರೀಗಳ ಅಭಯ
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು
ಅಕ್ರಮ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ: ಲಕ್ಷಾಂತರ ರೂ. ಮರಳು ವಶ
ಕೃಷಿ ಸಚಿವ ಬಿ.ಸಿ.ಪಾಟೀಲ್ ಮೀಟಿಂಗ್ ಮಾಡಿ ಸಂಜೆ ಸೂಟ್ಕೇಸ್ ಹೆಗಲಿಗೆ ಹಾಕಿಕೊಂಡು ಹೋಗ್ತಾರೆ- ಶಿವರಾಜ್ ತಂಗಡಗಿ
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ- ಅಂಜನಾದ್ರಿಯಲ್ಲಿ ರಾಮ ಬಂಟನಿಗೆ ಹೋಮ ಹವನ..!
ಬಾನಾಮತಿಯೋ? ಕಾಕತಾಳಿಯವೋ? – ಏಕಾಏಕಿ ಸ್ಕಿಡ್ ಆದ ನಾಲ್ಕು ಬೈಕ್ಗಳು..!