Featured
ಕೊರನಾ ಮಹಾಮಾರಿಗೆ ಬೆದರಿದ ಜನ – ಊರು ಬಿಟ್ಟು ಗುಳೆ ಹೊರಟ ಕಾರ್ಮಿಕರು..!
ರೈಸಿಂಗ್ ಕನ್ನಡ:
ವಿಶ್ವಕುಮಾರ್, ಬೀದರ್:
ಕರ್ನಾಟಕದ ಕಾಶ್ಮೀರ ಅಂದರೆ ಅದು ಬೀದರ್. ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ಮಹಾಮಾರಿ ದಿನ ಕಳೆದಂತೆ ಏಎರಿಕೆಯಾಗತೊಡಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಬೀದರ್ನಲ್ಲಿ ಇಲ್ಲಿವರೆಗೆ 1061 ಜನರಿಗೆ ಸೋಂಕು ದೃಡಪಟ್ಟಿದ್ದು, 53 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇತ್ತ ಇನ್ನು 366 ಪ್ರಕರಣಗಳು ಸಕ್ರಿಯವಾಗಿದ್ದು ಜನ ಆತಂಕದಲ್ಲೆ ಬದುಕುವಂತಾಗಿದೆ.
ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಜಿಲ್ಲೆಯ ಜನತೆಯಲ್ಲಿ ಕ್ಷಣ ಕ್ಷಣಕ್ಕೂ ಆತಂಕಮನೆ ಮಾಡಿದೆ. ಹೀಗಾಗಿ ಜನ ತಮ್ಮ ಜೀವ ರಕ್ಷಣೆಗಾಗಿ ಊರನ್ನ ಬಿಟ್ಟು ಹೋಗಲು ಮುಂದಾಗಿದ್ದಾರೆ. ನಗರದ ಕೆಲ ಭಾಗದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಜನ ಇವತ್ತಿನ ಪರಿಸ್ಥಿತಿಯಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಬದುಕು ಕಟ್ಟಿ ಕೊಳ್ಳುತ್ತಿದ್ದಾರೆ. ಜೀವ ಉಳಿದರೆ ಮುಂದೆ ಹೇಗೋ ಬದುಕು ಮತ್ತೆ ಕಟ್ಟಿಕೊಳ್ಳಬಹುದು ಅಂತಾ ಜನತೆ ಈಗ ಊರು ಬಿಟ್ಟು ಬೇರೊಂದು ಕಡೆ ಮುಖಮಾಡಿದ್ದಾರೆ.
ಇತ್ತ ರಾಜ್ಯದಲ್ಲಿಕೋರೊನಾ ಸೊಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೊಷಿಸಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ 30 ಡೆಂಜರ್ ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆ ಸಹ ಒಂದಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಬೀದರ್ ಜಿಲ್ಲೆಯನ್ನ ನಿರ್ಲಕ್ಷ್ಯ ತೊರಿಸಿ ಜಿಲ್ಲೆಯನ್ನ ಹೊರತು ಪಡೆಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳನ್ನ ಲಾಕ್ ಡೌನ್‌ಮಾಡಿದೆ. ಈದು ಜಿಲ್ಲೆಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಜಿಲ್ಲೆಯ ಜನತೆ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದರೂ ರಾಜ್ಯ ಸರ್ಕಾರ ಇನ್ನೂ ಲಾಕ್ ಡೌನ್ ಘೋಷಣೆಗೆ ಮುಂದಾಗದೆ ಇರೋದು ವಿಪರ್ಯಾಸವೆ ಸರಿ. ಇತ್ತ ಮಹಾರಾಷ್ಟ್ರ ಅತ್ತ ತೆಲಂಗಾಣ ರಾಜ್ಯಗಳಲ್ಲೂ ಬೀದರ್ ಜಿಲ್ಲೆಯ ಜನತೆ ತಮ್ಮ ಹಸಿವಿನ ಜೋಳಿಗೆ ತುಂಬಿಸಿ ಕೊಳ್ಳಲು ಹೋದವರ ಬದುಕು ಸಹ ಮೂರಾಬಟ್ಟೆಯಾಗಿದೆ. ಎರಡು ರಾಜ್ಯಗಳಲ್ಲೂ ಕೋರೊನಾ ಮಹಾಮಾರಿ ಹೆಚ್ಚಾಗಿದ್ದು ಇತ್ತ ತಮ್ಮ ಊರುಗಳಿಗೂ ಬಾರದಂತಾಗಿದೆ. ಈಗಲಾದರು ರಾಜ್ಯಸರ್ಕಾರ ಬೀದರ್ ಜಿಲ್ಲೆಯನ್ನ ಲಾಕ್ ಡೌನ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.
You may like
ಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!
ಭಾರತಕ್ಕೆ ಕಾಲಿಟ್ಟ ಹೊಸ ಮಾದರಿಯ ಕೊರೊನಾ: ಶಾಲೆ ಪುನರಾರಂಭದ ಬಗ್ಗೆ ಪರಿಶೀಲಿಸುತ್ತಾ ರಾಜ್ಯ ಸರ್ಕಾರ ?
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ
ನೀಟ್ ಪರೀಕ್ಷೆಯಲ್ಲಿ 9ನೇ ಸ್ಥಾನ : ಉಸ್ತುವಾರಿ ಸಚಿವ ಪ್ರಭುಚೌಹಾಣ್ರಿಂದ ಅಭಿನಂದನೆ