ಆರೋಗ್ಯ
ಸ್ವಲ್ಪ ಜೋರಾಗಿ ನಕ್ಕರೆ/ಕೆಮ್ಮಿದ್ರೆ ಮೂತ್ರ ಬರುತ್ತಾ? ಈ ರೋಗ ಬರೋ ಮುನ್ನ ಲಕ್ಷಣಗಳನ್ನ ತಿಳಿದುಕೊಳ್ಳಿ
![](https://risingkannada.com/wp-content/uploads/2024/03/RRRRR.png)
Health tips: ಈ ಸಮಸ್ಯೆ ಮೊದಲಿನಿಂದಲೂ ಇದೆ. ಈ ಹಿಂದೆ 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಇದೀಗ 30ರ ಆಸುಪಾಸಿನ ಮಹಿಳೆಯರಲ್ಲಿಯೂ ಈ ಸಮಸ್ಯೆ ಕಂಡು ಬರುತ್ತಿವೆ.
ಕೆಲವೊಂದು ವಿಚಿತ್ರ ರೋಗಗಳು ನಮ್ಮನ್ನು ಮುಜುಗರಕ್ಕೆ ಉಂಟು ಮಾಡುತ್ತವೆ. ಈ ಬಗ್ಗೆ ಬೇರೆಯವರೊಂದಿಗೆ ಹೇಳಿಕೊಳ್ಳಲು ಆಗಲ್ಲ. ಆದರೆ ಎಷ್ಟೋ ಜನರಿಗೆ ಈ ರೋಗದ ಬಗ್ಗೆ ಗೊತ್ತಿರಲ್ಲ.
ಕೆಲವರಿಗೆ ಜೋರಾಗಿ ನಕ್ಕಾಗ ಅಥವಾ ಕೆಮ್ಮಿದಾಗ ಸ್ವಲ್ಪ ಮೂತ್ರ ಬರುತ್ತದೆ. ಈ ಸಮಸ್ಯೆಯ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಸಂಕೋಚದಿಂದ ಮಹಿಳೆಯರು ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳಲ್ಲ. ಆದರೆ ಮರೆ ಮಾಡೋದರಿಂದ ಈ ಸಮಸ್ಯೆ ನಿವಾರಣೆ ಆಗಲ್ಲ.
ಮೂರು ಯೋಗಾಸನಗಳ ಮೂಲಕ ಈ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು. ಯೋಗ ಗುರು ಮತ್ತು ಫಿಟ್‌ನೆಸ್ ತಜ್ಞ ಹೀರೋ ಲಾಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮೂತ್ರ ಸೋರಿಕೆಯ ಸಮಸ್ಯೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಈ ಹಿಂದೆ ವಯಸ್ಸಾದ ಮಹಿಳೆಯರಲ್ಲಿಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅಂದರೆ 50 ವರ್ಷಗಳ ನಂತರ ಸಂತಾನೋತ್ಪತ್ತಿ ಅಂಗಗಳು, ಶ್ರೋಣಿಯ ಪ್ರದೇಶವು ದುರ್ಬಲಗೊಂಡಾಗ, ಮಹಿಳೆಯರು ಈ ಸಮಸ್ಯೆಗೆ ತುತ್ತಾಗುತ್ತಿದ್ದರು. ಆದರೆ ಈಗ 30ನೇ ವಯಸ್ಸಿನಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ.
ಈ ಸಮಸ್ಯೆಯ ನಿವಾರಣೆಗೆ ಮಹಿಳೆಯರು ಮೂರು ಕೆಲಸಗಳನ್ನು ಮಾಡಬೇಕು. ನಿಮ್ಮ ಊಟ ತುಂಬಾ ಹಗುರವಾಗಿರಬೇಕು ಮತ್ತು ಕುಣಿಯೋದು/ಜಿಗಿಯುವದನ್ನು ನಿಲ್ಲಿಸಬೇಕು. ಇದರ ಜೊತೆಗೆ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಇವುಗಳ ಜೊತೆ ಮೂರು ಯೋಗಾಸನಗಳನ್ನು ಮಾಡಬೇಕು.
ಚಿಟ್ಟೆ ಭಂಗಿ: ಮೂತ್ರ ಲೀಕೇಜ್ ಸಮಸ್ಯೆ ಇರೋ ಮಹಿಳೆಯರು ಮೊದಲು ನೆಲದ ಮೇಲೆ ಕುಳಿತುಕೊಳ್ಳಬೇಕು. ಈಗ ನಿಮ್ಮ ಎರಡೂ ಹಿಮ್ಮಡಿಗಳನ್ನು ಒಟ್ಟಿಗೆ ತನ್ನಿ. ನಂತರ ಮೊಣಕಾಲುಗಳ ಸಹಾಯದಿಂದ ಕಾಲುಗಳನ್ನು ಸರಿಸಿಕೊಳ್ಳಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?