Featured
ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ ಪ್ರೀತಿ , ದಂಡಿಸುವುದು ಪ್ರೀತಿನೇ…
![](https://risingkannada.com/wp-content/uploads/2019/11/l.jpg)
ರೈಸಿಂಗ್ ಕನ್ನಡ:- ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದಷ್ಟೆ ಪ್ರೀತಿಯಲ್ಲ. ಕೊಡಿಸದೇ ಇದ್ದು ನಿರಾಕರಣೆಯ ನೋವು ಸಹಿಸೋದನ್ನು ಕಲಿಸೋದು ಕೂಡ ಪ್ರೀತಿನೇ. ಕೇಳಿದ್ದಲ್ಲಿಗೆ ಕರೆದೊಯ್ಯುವುದು/ಕಳಿಸುವಷ್ಟೆ ಅಲ್ಲ, ಕರೆದೊಯ್ಯದೆ/ ಕಳಿಸದೇ ಮನೆಯಲ್ಲಿ ಇರುವಂತೆ ಮಾಡಿ ನಿರಾಸೆಯನ್ನು ಅರಗಿಸಿಕೊಳ್ಳೋದನ್ನು ತಿಳಿಸೋದೂ ಪ್ರೀತಿ.
ಕೇಳಿದ್ದೆಲ್ಲವನ್ನೂ ಅವರ ಬಾಯಿಂದುದುರಿದ ತಕ್ಷಣ ಹಾಜರುಪಡಿಸೋದಷ್ಟೇ ಅಲ್ಲ. ತಮ್ಮ ಅಗತ್ಯಗಳಿಗಾಗಿ ಕಾಯುವ ತಾಳ್ಮೆ ಕಲಿಸೋದೂ ಪ್ರೀತಿ. ಅವರು ಹೋದ ದಾರಿಯಲ್ಲಿಯೇ ಅವರನ್ನು ಅವರ ಪಾಡಿಗೆ ಬಿಡುವುದಷ್ಟೇ ಅಲ್ಲ, ಸರಿಯಾದ ದಾರಿಯನ್ನು ತೋರಿಸುವುದೂ ಕೂಡ ಪ್ರೀತಿನೇ.
ಅವರಿಗೆ ಅನಿಸಿದೆಲ್ಲವನ್ನೂ ಹೇಳುವಷ್ಟು ಸ್ವಾತಂತ್ರಯ ಕೊಡುವುದಷ್ಟೇ ಅಲ್ಲ ಪ್ರೀತಿ, ಯಾವ ಸಮಯದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬುವುದರ ಅರಿವು ಮೂಡಿಸೋದೂ ಪ್ರೀತಿ. ಆಸೆ ಪಟ್ಟದ್ದೆಲ್ಲವನ್ನೂ ಕೊಂಡು ತಯಾರಿಸಿ ತಿನಿಸುವುದು ಅಷ್ಟೇ ಅಲ್ಲ ಪ್ರೀತಿ, ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ನಿಗಾವಹಿಸೋದನ್ನು ರೂಡಿಸುವುದು ಪ್ರೀತಿನೇ.
ಅವರಿಗೆ ಬೇಕಾದ್ದನ್ನೆಲ್ಲಾ ಮಾಡೋದಕ್ಕೆ ಅನುವು ಮಾಡಿಕೊಡೋದಷ್ಟೇ ಅಲ್ಲ ಪ್ರೀತಿ, ಮಾಡಲೇಬಾರದಂಥವುಗಳ ಬಗ್ಗೆ ತಿಳಿಹೇಳಿ ತಿದ್ದೊದು ಕೂಡ ಪ್ರೀತಿನೇ. ಅವರಿಗೆ ಬೇಕಾದಷ್ಟು ಖರ್ಚಿಗೆ ಹಣ ನೀಡೋದಷ್ಟೇ ಅಲ್ಲ ಪ್ರೀತಿ, ಅದರ ದುಡಿಮೆಗೆ ಪಟ್ಟಶ್ರಮ ಮತ್ತದರ ಬೆಲೆ ತಿಳಿಸೋದೂ ಕೂಡ ಪ್ರೀತಿಯೇ. ಸಾಯುವವರೆಗೆ ದುಡಿಯುವುದನ್ನಷ್ಟೇ ಕಲಿಸೋದಲ್ಲ , ದುಡಿತವನ್ನು ಉಳಿಸಿ ಭವಿಷ್ಯಕ್ಕೆ ಕೂಡಿಡೋದನ್ನು ಕಲಿಸೋದೂ ಪ್ರೀತಿಯೇ.
ತನ್ನಿಂದಾಗದ ಕೆಲಸವೇ ಇಲ್ಲ ಎಂಬಷ್ಟು ಹುರುವು ತುಂಬೋದಷ್ಟೇ ಅಲ್ಲ ಪ್ರೀತಿ , ನನ್ನಂತಯೇ ಇತರರೂ ಎಲ್ಲರೂ ಕೂಡಿ ನೆಮ್ಮದಿಯಿಂದಿರಬೇಕೆಂಬುದನ್ನು ತಿಳಿಸೋದೂ ಪ್ರೀತಿ. ಬರಿಯೂ ಸುಖ , ಗೆಲವು, ಸಂತೋಷಗಳನ್ನಷ್ಟೇ ಒಪ್ಪೋದಲ್ಲ, ಕಷ್ಟ, ನೋವು, ಸೋಲುಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸೋದನ್ನ ಕಲಿಸೋದೂ ಪ್ರೀತೀಯೇ. ದುಡಿಮೆಯ ಜಾಲದಲ್ಲಿ ಸಿಕ್ಕ ಯಾಂತ್ರಿಕವಾಗೋದಷ್ಟೇ ಅಲ್ಲ, ಮಾನವೀಯತೇ ಮೌಲ್ಯಗಳ ರೂಢಿಸಿಕೊಳ್ಳೋದನ್ನ ಕಲಿಸೋದೂ ಕೂಡ ಪ್ರೀತೀಯೇ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?