Featured
ನನ್ನ ಸಿದ್ದರಾಮಯ್ಯ ನಡುವೆ ಶತ್ರುತ್ವ ಇಲ್ಲ : ನಾವಿಬ್ಬರೂ ಚೆನ್ನಾಗಿದ್ದೇವೆ ಎಂದ ಡಾ.ಜಿ. ಪರಮೇಶ್ವರ್

ಬೆಂಗಳೂರು : ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಭೇಟಿ ಬಳಿಕ ಬೆಂಗಳೂರಿಗೆ ವಾಪಸ್ ಆಗಿರೋ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಇವತ್ತು ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತ್ನಾಡಿದ ಪರಮೇಶ್ವರ್, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಶತ್ರುತ್ವ ಇಲ್ಲ. ನಾವಿಬ್ಬರೂ ಚೆನ್ನಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗಿರುತ್ತದೆ. ಹೀಗಾಗಿ ಕೆಲವೊಂದು ಷಡ್ಯಂತ್ರ ನಡೆದಿದೆ ಎಂದು ಪರಮೇಶ್ವರ್ ಆರೋಪಿಸಿದ್ರು.
ಇದೇ ವೇಳೆ ಮಾತ್ನಾಡಿದ ಪರಮ್, ನಾನು ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ಸಿದ್ದು ಜೊತೆ ಕೆಲಸ ಮಾಡಿದ್ದೇನೆ. ಅವರ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಕೆಲವೊಂದು ಅಭಿಪ್ರಾಯ ಬೇರೆ ಬೇರೆ ಇರಬಹುದು. ನನ್ನ ಕೆಲವು ಅಭಿಪ್ರಾಯ ಅವರು ಕೇಳದೇ ಇರಬಹುದು. ಅವರ ಕೆಲವು ಅಭಿಪ್ರಾಯ ನಾನು ಕೇಳದೇ ಇರಬಹುದು. ಆದರೆ, ಇಬ್ಬರೂ ಎಲ್ಲೂ ಭಿನ್ನವಾಗಿಲ್ಲ ಎಂದ್ರು.
ನಮ್ಮಲ್ಲಿ ಮೂಲ ಕಾಂಗ್ರೆಸಿರು, ವಲಸಿಗರು ಅನ್ನೋ ಬೇಧಭಾವವಿಲ್ಲ. ಹಾಗಿದ್ದಿದ್ದರೆ ಸಿದ್ದು, ಸಿಎಂ ಆಗುತ್ತಲೇ ಇರ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ರು. ನಾವೆಲ್ಲಾ ಒಟ್ಟಾಗಿ ಪಕ್ಷ ಕಟ್ಟಬೇಕು. ಎಲ್ಲರೂ ಸೇರಿಯೇ ಮತ್ತೆ ಅಧಿಕಾರಕ್ಕೆ ಬರಬೇಕು. ಸಾಮೂಹಿಕ ನಾಯಕತ್ವದಿಂದ ಮಾತ್ರ ಎಲ್ಲವೂ ಸಾಧ್ಯ ಎಂದು ಪರಮೇಶ್ವರ್ ಹೇಳಿದ್ರು. ಇದೇ ವಿಚಾರವನ್ನ ಸೋನಿಯಾ ಗಾಂಧಿ ಬಳಿ ಚರ್ಚೆ ನಡೆಸಿರೋದಾಗಿ ಅವರು ಹೇಳಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















