Featured
ಮೋದಿ ಪ್ರಯಾಣಿಸುವ ವಿಮಾನ ಪಾಕಿಸ್ತಾನದ ಮೇಲೆ ಹಾರಾಡಲು ಬಿಡಲ್ಲ : ಪಾಕಿಸ್ತಾನದಿಂದ ಮತ್ತೆ ಉದ್ಧಟತನದ ಕಿತಾಪತಿ

ನವದೆಹಲಿ : ಪಾಪಿ ಪಾಕಿಸ್ತಾನಕ್ಕೆ ಎಷ್ಟೇ ಬುದ್ಧಿ ಹೇಳಿದ್ರೂ, ನಾಯಿ ಬಾಲ ಡೊಂಕು ಎನ್ನುವಂತಾಗಿದೆ. ಉಗ್ರರನ್ನ ಪೋಷಣೆ ಮಾಡ್ತಿರೋ ಪಾಕಿಸ್ತಾನ, ಭಾರತದ ವಿರುದ್ಧ ಮತ್ತೊಮ್ಮೆ ತೊಡೆತಟ್ಟಿ ನಿಲ್ಲೋಕೆ ರೆಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದೇ ಸೆಪ್ಟೆಂಬರ್ 21ರಿಂದ ಒಂದು ವಾರಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ತಿದ್ದಾರೆ. ಆದ್ರೆ, ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸೋ ವಿಮಾವನ್ನ ಪಾಕಿಸ್ತಾನದ ಮೇಲೆ ಹಾರಾಡಲು ಬಿಡೋದಿಲ್ಲ ಎಂದು ಪಾಕಿಸ್ತಾನ ಉದ್ಧಟತನ ತೋರಿದೆ.
ಸುದ್ದಿ ಸಂಸ್ಥೆ ಜೊತೆ ಮಾತ್ನಾಡಿರೋ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ, ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕೆ ಹೋಗುವಾಗ ಪಾಕಿಸ್ತಾನದ ಏರ್ಸ್ಪೇಸ್ ಬಳಲು ನಾವು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಕಳೆದ ವಾರವಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಿಮಾನಕ್ಕೂ ಪಾಕಿಸ್ತಾನ ಇದೇ ರೀತಿ ಕಿರಿಕ್ ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರೋ ಭಾರತೀಯ ಸಚಿವಾಲಯದ ವಕ್ತಾರ, ರವೀಶ್ ಕುಮಾರ್, ಇದು ಪಾಕಿಸ್ತಾನದ ಉದ್ಧಟತನ ತೋರಿಸುತ್ತೆ. ಕಳೆದ ಎರಡು ವಾರಗಳಲ್ಲಿ ಇದು ಎರಡನೇ ಬಾರಿ ಈ ರೀತಿಯಾಗಿ ವರ್ತನೆ ತೋರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ನಿರ್ಧಾರವನ್ನ ನಾವು ಖಂಡಿಸುತ್ತೇವೆ ಎಂದಿರೋ ರವೀಶ್ ಕುಮಾರ್, ವಿವಿಐಪಿ ವಿಮಾನಗಳಿಗೆ ಬೇಕು ಅಂತಲೇ ಈ ರೀತಿ ತಡೆ ನೀಡ್ತಿರೋದು ಸರಿ ಅಲ್ಲ ಎಂದಿದ್ದಾರೆ.
ಭಾರತದ ಮುಂದಿನ ನಡೆ ಏನು.? ಭಾರತ ಮುಂದೇನು ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?