Featured
ಮೋದಿ, ಅಮಿತ್ ಶಾ & ಅಜಿತ್ ದೋವಲ್ ಹತ್ಯೆಗೆ ಉಗ್ರರ ಸಂಚು : ಸ್ಫೋಟಕ ಸತ್ಯ ಬಹಿರಂಗ

ರೈಸಿಂಗ್ ಕನ್ನಡ : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆಗೆ ಉಗ್ರರು ಸಂಚು ರೂಪಿಸಿರೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರೋದ್ರಿಂದ ಉಗ್ರ ಸಂಘಟನೆಗಳು ಆಕ್ರೋಶಗೊಂಡಿದ್ದು, ಭಾರತೀಯ ನಾಯಕರ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ.
ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ಹಿನ್ನೆಲೆಯಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ಮೋದಿ, ಅಮಿತ್ ಶಾ ಹಾಗೂ ಅಜಿತ್ ದೋವಲ್ ಅಷ್ಟೇ ಅಲ್ಲದೆ, ಭಾರತದ ಪ್ರಮುಖ 30 ನಗರಗಳಲ್ಲಿ ಸ್ಫೋಟಕ ನಡೆಸಲು ಸ್ಕೆಚ್ ನಡೆದಿದೆ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ 500 ಉಗ್ರರು ಭಾರತ ಪ್ರವೇಶ ಮಾಡಲು ಸಂಚು ನಡೆಸ್ತಿದ್ದಾರೆ.
ಈಗಾಗಲೇ ಶ್ರೀನಗರ, ಜಮ್ಮು, ಪಠಾಣ್ ಕೋಟ್, ಹಿಂಡನ್ ಸೇರಿದಂತೆ ಗಡಿ ಭಾಗದಲ್ಲಿರೋ ವಾಯುನೆಲೆಗಳ ಮೇಲೆ ಉಗ್ರರು ದಾಳಿ ನಡೆಸೋ ಭೀತಿ ಇದೆ ಎನ್ನಲಾಗಿದೆ. ಇದಕ್ಕೆ ಪೂರ್ವ ಭಾವಿಯಾಗಿ ಎಲ್ಲಾ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತದ ಭದ್ರತಾ ಪಡೆಗಳು ಹೇಳಿವೆ.
ಉಗ್ರರ ಪ್ರಮುಖ ಟಾರ್ಗೆಟ್ ಮೋದಿ, ಅಮಿತ್ ಶಾ ಹಾಗೂ ಅಜಿತ್ ದೋವೆಲ್. ಮೂವರು ಭಾರತದ ಭದ್ರತಾ ವಿಚಾರದಲ್ಲಿ ಸಾಕಷ್ಟು ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ, ಮೂವರಲ್ಲಿ ಒಬ್ಬರನ್ನಾದ್ರೂ ಹತ್ಯೆ ಮಾಡಿದ್ರೆ, ಭಾರತದ ಭದ್ರತಾ ವಿಚಾರ ವೀಕ್ ಆಗಬಹುದು ಅನ್ನೋದು ಉಗ್ರರ ಪ್ಲಾನ್ ಎನ್ನಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?