Featured
ದೀಪಾವಳಿ ಆದ್ಮೇಲೆ ನಿಮ್ಮ ದಿನ ಭವಿಷ್ಯ ಹೇಗಿದೆ..?
![](https://risingkannada.com/wp-content/uploads/2019/10/IMG-20191028-WA0000.jpg)
ಬೆಂಗಳೂರು : ಇವತ್ತು ಸೋಮವಾರ, ದಿನಾಂಕ 28/10/2019. Dr. ಬಸವರಾಜ್ ಗುರೂಜಿ ಜ್ಯೋತಿಷ್ಯ… ಯಾವ ರಾಶಿ ಭವಿಷ್ಯ ಹೇಗಿದೆ ನೋಡೋಣ.
ಮೇಷ : ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ.
ವೃಷಭ : ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಯಾವುದೋ ಕಾರಣಕ್ಕೆ ನಿಮ್ಮಿಂದ ತಪ್ಪಾಗಿರುವುದನ್ನೇ ಪುನಃ ಪುನಃ ನೆನೆಸಿ ನಿಮಗೆ ಕಿರುಕುಳ ಕೊಡುವರು. ಇದು ಒಂದು ರೀತಿಯ ಪರೀಕ್ಷೆ ಕಾಲ. ಮನಸ್ಸಿನಲ್ಲಿ ಕುಲ ದೇವರನ್ನು ಸ್ಮರಿಸಿಕೊಳ್ಳಿ.
ಮಿಥುನ : ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನ ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿ. ಕೋರ್ಟು ಕಚೇರಿ ಎಂದು ಹೋದರೆ ನಿಮಗೆ ದಕ್ಕಬೇಕಾದ ಆಸ್ತಿಯು ಸಿಗದೇ ಹೋಗಬಹುದು.
ಕರ್ಕಾಟಕ : ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿ ಅನಗತ್ಯ ಸಂಶಯವನ್ನು ಹುಟ್ಟು ಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಾಧಿಕಾರಿಗಳ ಕೆಂಗಣ್ಣಿಗೆ ಕಾರಣವಾಗುತ್ತದೆ.
ಸಿಂಹ : ಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೆ ಎದುರಿಸಬೇಕು. ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ನಿಮಗೆ ಕಿರುಕುಳ ಎದುರಾಗುವುದು. ಅದಕ್ಕೆ ಅಂಜದೆ ಅವರದೇ ರೀತಿಯಲ್ಲಿ ಉತ್ತರ ನೀಡಿ.
ಕನ್ಯಾ : ಮನೆಯ ಸಮಸ್ಯೆಗಳನ್ನು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುದು ಮತ್ರು ಎಲ್ಲರೂ ಒಪ್ಪುತ್ತಾರೆ.
ತುಲಾ : ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮ ಕಾರ್ಯವನ್ನು ಕೊಂಡಾಡುತ್ತಾರೆ. ನಿಮ್ಮ ಹಳೆಯ ಗೆಳೆಯರಿಗೆ ಫೋನ್ ಮಾಡಿ, ಮಾರುಕತೆ ನಡೆಸಿ.
ವೃಶ್ಚಿಕ : ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿ ಇರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುತ್ತದೆ. ಶತ್ರುಗಳನ್ನು ಕೂಡಾ ಪ್ರೀತಿಸುವಿರಿ.
ಧನು : ಬಹುದಿನದ ನಿರೀಕ್ಷೆ, ಕನಸು ಕೈಗೂಡುತ್ತದೆ. ಎಲ್ಲರಂತೆ ನೀವು ಕೂಡ ಸಮಾಜ ಮುಖಿಯಾಗಿ ಉನ್ನತ ಅಧಿಕಾರವನ್ನು ಹೊಂದುವಿರಿ. ಇದರಿಂದ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುತ್ತದೆ.
ಮಕರ : ನಿರಾಶೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇದೆ. ಆದರೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.
ಕುಂಭ : ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡ ಸಂತಸ ಸಂಭ್ರಮವನ್ನು ಉಂಟುಮಾಡುವಿರಿ.
ಮೀನ : ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ. ಅದರಲ್ಲಿ ಜಯವನ್ನು ಕೂಡ ಸಂಪಾದನೆ ಮಾಡುವಿರಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?