Featured
ಕೋಮಾದಲ್ಲಿ ಕಿಮ್ ಜಾನ್- ಉತ್ತರ ಕೊರಿಯಾದ ಆಡಳಿತ ನೋಡಿಕೊಳ್ತಿದ್ದಾರೆ ಕಿಮ್ ಯೋ ಜಾಂಗ್

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
Advertisement
ಉತ್ತರ ಕೊರಿಯಾದಲ್ಲಿ ಏನು ನಡೆಯುತ್ತಿದೆ ಅನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಮಾದಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ದೇಶದ ಆಡಳಿತವನ್ನು ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ನೋಡಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಿಮ್ ಅವರು ಇತ್ತೀಚೆಗೆ ತಮ್ಮ ಸಹೋದರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುತ್ತಿದ್ದರು. ಇದು ಅವರು ಅನಾರೋಗ್ಯಕ್ಕೀಡಾಗಿರುವುದರ ಸಂಕೇತ ಎಂದು ದಕ್ಷಿಣ ಕೊರಿಯಾದ ರಾಜ್ಯ ವ್ಯವಹಾರಗಳ ಮೇಲ್ವಿಚಾರಣಾ ಕಚೇರಿಯ ಮುಖ್ಯಸ್ಥರಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿದ್ದಾರೆ.
ಈ ನಡುವೆ ಉತ್ತರ ಕೊರಿಯಾದಲ್ಲಿ ಆಡಳಿತದಲ್ಲಿ ಬದಲಾವಣೆ ಆಗಿರುವುದನ್ನು ಯಾರೂ ಅಧಿಕೃತವಾಗಿ ತಿಳಿಸಿಲ್ಲ. ಒಟ್ಟಿನಲ್ಲಿ ಉತ್ತರ ಕೊರಿಯಾ ಗುಪ್ತ ಕೊರಿಯಾ ಆಗಿದೆ ಅನ್ನುವುದರಲ್ಲಿ ಸಂಶಯವಿಲ್ಲ.
Advertisement
Continue Reading
Advertisement
You may like
Click to comment