Featured
ಸಾಮಾಜಿಕ ಅಂತರ ಇಲ್ಲವೇ ಇಲ್ಲ – SSLC ಪರೀಕ್ಷೆ ಬಳಿಕ ಜಮಾವಣೆಗೊಂಡ ವಿದ್ಯಾರ್ಥಿಗಳು, ಪೋಷಕರು!

ರೈಸಿಂಗ್ ಕನ್ನಡ :
ಯಾದಗಿರಿ :
ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಇವತ್ತಿನಿಂದ ಆರಂಭವಾಗಿದೆ ನಿಜ. ಆದ್ರೆ, ಕೊರೊನಾ ಕಂಟಕವನ್ನ ಮಾತ್ರ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಪರೀಕ್ಷೆ ಆರಂಭವಾದಾಗ ಇದ್ದ ಎಚ್ಚರಿಗೆ, ಪರೀಕ್ಷೆ ಬಳಿಕ ಎಲ್ಲಾ ಕಾಣಿಸುತ್ತಿಲ್ಲ . ಯಾದಗಿರಿಯಲ್ಲಿ ಪರೀಕ್ಷೆ ಬಳಿಕ ಸಾಮಾಜಿಕ ಅಂತರದ ಕಲ್ಪನೆಯೇ ಮರೆತು ಹೋಗಿದೆ. ವಿದ್ಯಾರ್ಥಿಗಳು ಗುಂಪುಗುಂಪಾಗಿ ಓಡಾಡುತ್ತಿದ್ದ ದೃಶ್ಯಗಳಾ ಸಾಮಾನ್ಯವಾಗಿತ್ತು. 
ನಗರದ ಚಿರಂಜೀವಿ ಮೆಥೋಡಿಸ್ಟ್ ಪ್ರೌಢ ಶಾಲೆ ಮುಂಭಾಗ, ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗಲು ನೂರಾರು ಪೋಷಕರು ಬಂದಿದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ಕೂಡ ಸಾಮಾಜಿಕ ಅಂತರವನ್ನ ಮರೆತು ಓಡೋಡಿ ಬಂದ್ರು. ಪರೀಕ್ಷೆ ಆರಂಭಕ್ಕೂ ಮುಂಚೆ ಇದ್ದಂತೆ ಯಾವೊಬ್ಬ ಭದ್ರತಾ ಸಿಬ್ಬಂದಿಯೂ ಪರೀಕ್ಷೆ ಬಳಿಕ ಕಾಣಿಸಲೇ ಇಲ್ಲ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರು ಕೂಡ ಕೊರೊನಾ ವಿಚಾರವನ್ನ ಬದಿಗಿಟ್ಟು ಬಂದಂತಿತ್ತು. ಮುಂದಿನ ದಿನಗಳಲ್ಲಾದರೂ ಈ ವಿಚಾರದಲ್ಲಿ ಜಾಗೃತೆ ವಹಿಸೋದು ಒಳಿತು.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?














