Featured
ಹೆಸರು ಹೇಳದೆ ಲಸಿಕೆ ಬಿಡುಗಡೆ ಮಾಡಲು ಸಜ್ಜಾದ ರಷ್ಯಾ: ಅಂತಿಮ ಪರೀಕ್ಷೆಗೂ ಮುನ್ನವೇ ಜನ ಬಳಕೆಗೆ ನಿರ್ಧಾರ
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಜಗತ್ತಿನಾದ್ಯಂತ ರುದ್ರ ತಾಂಡವಾಡುತ್ತಿರುವ ಹೆಮ್ಮಾರಿ ಕೊರೊನಾ ಆಟಕ್ಕೆ ಬ್ರೇಕ್ ಹಾಕಲು ಮುಂದಿನ ತಿಂಗಳಿನಲ್ಲೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಘೋಷಣೆ ಮಾಡಿದೆ. ಇದರೊಂದಿಗೆ ಇಡೀ ಜಗತ್ತಿಗೆ ಹೊಸ ಭರವಸೆಯೊಂದು ಮೂಡಿದೆ. ವಿಶೇಷ ಅಂದರೆ ಈ ಲಸಿಕೆಯ ಹೆಸರನ್ನ ಇನ್ನು ಬಹಿರಂಗ ಪಡಿಸಿಲ್ಲ.
ವಿಶ್ವಾದ್ಯಂತ 1.4 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು 6 ಲಕ್ಷ ಮಂದಿ ಉಸಿರು ಬಿಟ್ಟಿದ್ದಾರೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ರಷ್ಯಾ ಇದೆ. ಸೋಂಕಿನ ಅಪಾಯ ಅರಿತಿರುವ ರಷ್ಯಾ ಮೂರನೇ ಪ್ರಯತ್ನದಲ್ಲೆ ಲಸಿಕೆಯನ್ನ ಬಳಕೆಗೆ ಸಿದ್ಧವಾಗಿದೆ.
ಮೂರು ಮತ್ತು ಕಡೆಯ ಹಂತದ ಪರೀಕ್ಷೆಗೂ ಮೊದಲೇ ನಾವು ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತೇವೆ ಎಂದು ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮುರಷ್ಕೋವ್ ಹೇಳಿದ್ದಾರೆ.
ಹೊಸ ಲಸಿಕೆ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಆತ್ಮವಿಶ್ವಾಸದಿಂದಲೇ ನಿರ್ಧಾರ ಕೈಗೊಂಡಿದೆ. ಈ ಲಸಿಕೆ ಇನ್ನಷ್ಟು ಪ್ರಯೋಗಗಳಿಗೆ ಒಳಪಡಬೇಕು. ಈ ಪ್ರಕ್ರಿಯೆಯನ್ನು ಲಸಿಕೆ ಬಿಡುಗಡೆಗೆ ಸಮಾನಾಂತರವಾಗಿ ನಾವು ಮಾಡುತ್ತೇವೆ ಎಂದು ಆರೋಗ್ಯ ಸಚಿವ ವಿವರಿಸಿದ್ದಾರೆ.
ರಷ್ಯಾದ ಈ ಹೊಸ ಲಸಿಕೆ ಆಗಸ್ಟ್ 3ರಿಂದ ಸೌದಿ, ಯುಎಇಯಲ್ಲಿರುವ ಸಾವಿರಾರು ಜನರ ಮೇಲೆ ಪ್ರಯೋಗಗಳನ್ನ ನಡೆಸಲಿದೆ. ಈ ವರ್ಷ ಐದು ವಿದೇಶಗಳಲ್ಲಿ 17 ಮತ್ತು ತಮ್ಮ ದೇಶದಲ್ಲೆ 3 ಕೋಟಿ ಲಸಿಕೆ ಉತ್ಪಾದನೆ ಸಾಮರ್ಥ್ಯವಿರುವುದಾಗಿ ರಷ್ಯಾ ಹೇಳಿಕೊಂಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?