Featured
100 ರೂಪಾಯಿಗೂ ಕೇಳೋರಿಲ್ಲ ರೇಷ್ಮೆ ಗೂಡು- ಚೀನಾ ರೇಷ್ಮೆಯಿಂದ ರಾಜ್ಯದ ರೈತರು ಕಂಗಾಲು
ರೈಸಿಂಗ್ ಕನ್ನಡ:
ಹರೀಶ್, ರಾಮನಗರ:
ರೇಷ್ಮೆ ಬಟ್ಟೆ ಬೇಕು… ರೇಷ್ಮೆ ನೂಲಿನ ಪಂಚೆ, ಶಲ್ಯ ಎಲ್ಲವೂ ಬೇಕು.. ಆದ್ರೆ ರೇಷ್ಮೆ ಬೆಳೆಗಾರನ ಗೋಳು ಮಾತ್ರ ಯಾರಿಗೂ ಬೇಡ. ಕೊರೊನಾ ಮಹಾಮಾರಿ ಟೈಮ್ನಲ್ಲಂತೂ ರೇಷ್ಮೆ ಬೆಳೆಗಾರರು ಕಂಗೆಟ್ಟು ಹೋಗಿದ್ದಾರೆ. ಹಾಕಿದ ಅಸಲು ಕೂಡ ವಾಪಾಸ್ ಬಾರದೇ ಇರುವ ದುಃಸ್ಥಿತಿಗೆ ರೇಷ್ಮೆ ಬೆಳೆಗಾರರು ಬಂದು ನಿಂತಿದ್ದಾರೆ. ಚೀನಾದ ರೇಷ್ಮೆ ಕರ್ನಾಟಕದ ರೇಷ್ಮೆ ಬೆಳಗಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಬೆಲೆ ಕುಸಿತ, ರೋಗಬಾಧೆ, ಕೀಟಗಳ ಕಾಟದಿಂದ ತತ್ತರಿಸಿದ್ದ ರೇಷ್ಮೆ ಬೆಳೆಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋವಿಡ್-19 ನಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕೆ.ಜಿ ರೇಷ್ಮೆ ಬೆಳೆಯಲು ಒಬ್ಬ ರೈತ ಸುಮಾರು 300 ರೂಪಾಯಿ ಖರ್ಚು ಮಾಡುತ್ತಾನೆ. ಆದ್ರೆ, 300 ರೂ ಖರ್ಚು ಮಾಡಿ, ರೇಷ್ಮೇ ಗೂಡನ್ನು ಮಾರುಕಟ್ಟೆಗೆ ಮಾರಾಟಕ್ಕೆ ತಗೆದುಕೊಂಡು ಹೋದರೆ, ಕೇವಲ 100-150 ರೂ ಮಾತ್ರ ಸಿಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ಈ ಇದರಿಂದ ವಿಮುಖವಾಗುವಂತಹ ಸಂದಿಗ್ದ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಿಶ್ರತಳಿಯ ಗೂಡು ಪ್ರತಿ ಕೆ.ಜಿ 150 ರೂಗಳಂತೆ ಮಾರಾಟ ನಡೆಯುತ್ತಿದೆ. ದ್ವಿತಿಯ ತಳಿ ಗೂಡು ಸರಾಸರಿ ಪ್ರತಿ ಕೆ.ಜಿಗೆ 230 ರೂಗಳಂತೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ, ರೇಷ್ಮೆ ಧಾರಣೆಯೂ ಕಳೆದ ಒಂದು ದಶಕದ ಅವಧಿಯಲ್ಲಿಯೇ ಕನಿಷ್ಟ ಮಟ್ಟಕ್ಕೆ ಕುಸಿದಿದ್ದು, ರೈತರು ಕಂಗೆಟ್ಟಿದ್ದಾರೆ.
ಅಂದಹಾಗೆ, ರಾಮನಗರ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿ ಮಿಶ್ರ ತಳಿಯ ಗೂಡುಗಳನ್ನೇ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ, ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ದ್ವಿತೀಯ ತಳಿ ಗೂಡು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಕಳೆದ ವರ್ಷ ಮಿಶ್ರ ತಳಿಗೂಡಿಗೆ 350-400 ಹಾಗೂ ದ್ವಿತಿಯ ತಳಿಯಗೂಡಿಗೆ 650 ರೂ ವರೆಗೆ ಮಾರಾಟ ಕಂಡಿತ್ತು. ಆದ್ರೆ, ಈಗ ಧಾರಣೆ ಅರ್ಧಕ್ಕೆ ಕುಸಿದಿದೆ. ಗೂಡಿನ ಉದ್ಪಾದನಾ ವೆಚ್ಚವೇ 300 ರೂಪಾಯಿಯಾಗುತ್ತದೆ. ಆದ್ರೆ, ಇದೀಗ ಮಾರುಕಟ್ಟೆಯಲ್ಲಿ 100 ರೂಗೆ ಮಾರಾಟವಾಗುತ್ತಿದೆ.
ಇದರಿಂದಾಗಿ ರೈತರು ರೇಷ್ಮೆ ಹುಳುಗಳನ್ನ ರಸ್ತೆಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಮತ್ತೊಂದೆಡೆ ಚೀನಾ ಅ್ಯಪ್ ಗಳನ್ನ ಬ್ಯಾನ್ ಮಾಡಿದ ರೀತಿಯಲ್ಲಿ ಚೀನಾದಿಂದ ಬರುವ ರೇಷ್ಮೆ ಗೂಡನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದರೆ ರಾಜ್ಯದ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಒಟ್ಟಾರೆ, ಕರೋನಾದಿಂದಾಗಿ ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯೂ ಕೊಟ್ಟಿದ್ದಾರೆ. ಇದಕ್ಕೆ ಸರ್ಕಾರ ಯಾರ ರೀತಿ ನಿರ್ಧಾರ ತಗೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.
You may like
ನನಸಾಗದ ಕನಸು ಅಗಲಿದ ಕೆ. ಶಿವರಾಮ್
ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ನೀಟ್ ಪರೀಕ್ಷೆಯಲ್ಲಿ 9ನೇ ಸ್ಥಾನ : ಉಸ್ತುವಾರಿ ಸಚಿವ ಪ್ರಭುಚೌಹಾಣ್ರಿಂದ ಅಭಿನಂದನೆ
ಲಡಾಖ್ನಲ್ಲಿ 74ನೇ ಸ್ವಾತಂತ್ರ್ಯೋತ್ಸವ: 17 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಯೋಧರ ಸಂಭ್ರಮ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಬದಲಾಗಿಲ್ಲ:ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನೈ ತಲುಪಿದ ಸಿಎಸ್ಕೆ ತಂಡ – ಚೆನ್ನೈನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರು