Featured
ನಿತ್ಯಾನಂದನ ಕೈಲಾಸ ರಾಷ್ಟ್ರದಲ್ಲಿ ಹೊಸ ಕರೆನ್ಸಿ- 1 ಕೈಲಾಶಿಯನ್ ಡಾಲರ್‌ನಲ್ಲಿ 11.66 ಗ್ರಾಂ ಚಿನ್ನ..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಸ್ವಯಂ ಘೋಷಿತ ದೇವಮಾನವ ಬಿಡದಿ ನಿತ್ಯಾನಂದ, ಸ್ವತಃ ತಾನೇ ಕಟ್ಟಿಕೊಂಡಿರುವ ಕೈಲಾಸ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬ್ಯಾಂಕ್ ಮೂಲಕ ಕೈಲಾಶಿಯನ್ ಡಾಲರ್ ಎಂಬ ಕರೆನ್ಸಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕೈಲಾಶಿಯನ್ ಡಾಲರ್ ಅನ್ನು ಕೈಲಾದ ರಾಷ್ಟ್ರದ ಜೊತೆಗೆ ರಾಜ ತಾಂತ್ರಿಕ ಒಪ್ಪಂದ ಮಾಡಿಕೊಳ್ಳುವ ರಾಷ್ಟ್ರದ ಜೊತೆಗೆ ಅದನ್ನು ಚಲಾವಣೆಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಕೈಲಾಸ 8 ವಿವಿಧ ಮುಖಬೆಲೆಯುಳ್ಳ 77 ಬಂಗಾರದ ನಾಣ್ಯವನ್ನು ಬಿಡುಗಡೆ ಮಾಡಿದೆ. ಒಂದು ಕೈಲಾಶಿಯನ್ ಡಾಲರ್ ನಾಣ್ಯವು 1 ತೊಲ ಬಂಗಾರ ಅಂದ್ರೆ 11.66 ಗ್ರಾಂ ಚಿನ್ನ ಹೊಂದಿರಲಿದೆ. ಕಾಲು ಭಾಗದ ಕೈಲಾಶಿಯನ್ ಡಾಲರ್‌ನಲ್ಲಿ 2.91 ಗ್ರಾಂ ಚಿನ್ನ, ಅರ್ಧ ಕೈಲಾ ಶಿಯನ್ ಡಾಲರ್‌ನಲ್ಲಿ 5.81 ಗ್ರಾಂ ಚಿನ್ನ ಹಾಗೂ ಮುಕ್ಕಾಲು ಭಾಗದ ಕೈಲಾಶಿಯನ್ ಡಾಲರ್‌ನಲ್ಲಿ 8.77 ಗ್ರಾಂನಷ್ಟು ಚಿನ್ನ ಇರಲಿದೆ. 2 ಕೈಲಾಶಿಯನ್ ಡಾಲರ್‌ಗಳು ಸೇರಿದರೆ ಒಟ್ಟು 23.32 ಗ್ರಾಂ ಚಿನ್ನವಾಗಲಿದೆ ಎಂದು ನಿತ್ಯಾನಂದ ವಿವರಿಸಿದ್ದಾನೆ. ತನ್ನ ಫೇಸ್‌ಬುಕ್ ಪುಟ KAILASA’s HDH Nithyananda Paramashivam ನಲ್ಲಿ ಈ ಕುರಿತಂತೆ ಪ್ರಕಟಣೆ ನೀಡಲಾಗಿದೆ.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















