Featured
ಕೊರೊನಾಗೆ ಲಸಿಕೆ – 1,048 ಜನರ ಮೇಲೆ ಪ್ರಯೋಗ..! – ಇದು ಝೈಡಸ್ ಕ್ಯಾಡಿಲಾ ಸಂಶೋಧನೆ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಜಾಗತಿಕ ಸಾಂಕ್ರಾಮಿಕವಾಗಿರೋ ಕೊರೊನಾ ವೈರಸ್‌ಗೆ ಔಷಧಿ ಕಂಡು ಹಿಡಿಯುವ ಪ್ರಕ್ರಿಯೆ ನಿರ್ಣಾಯಕ ಹಂತ ತಲುಪಿದೆ. ಅದ್ರಲ್ಲೂ ಹೆಮ್ಮೆಯ ವಿಚಾರ ಅಂದ್ರೆ, ಭಾರತದಲ್ಲೇ ಈ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಿರೋದಾಗಿ ಝೈಡಸ್ ಕ್ಯಾಡಿಲಾ ಸಂಸ್ಥೆ ತಿಳಿಸಿದೆ.

ಕೊರೊನಾಗೆ ಝೋಕೊವ್-ಡಿ ಅನ್ನೋ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಪ್ರಯೋಗ ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಔಷಧಿ ಪ್ರಯೋಗಕ್ಕಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ಪಡೆದಿರುವ ಈ ಸಂಸ್ಥೆ, ಇದರಲ್ಲಿ ಯಶಸ್ಸು ಸಾಧಿಸುವ ವಿಶ್ವಾಸದಲ್ಲಿದೆ. ಈಗಾಗಲೇ ಎರಡು ಹಂತದಲ್ಲಿ ಔಷಧಿಯ ಪ್ರಯೋಗ ಮಾಡಲಾಗಿದೆಯಂತೆ.
ಈ ಪ್ರಯೋಗಕ್ಕಾಗಿ ಭಾರತದಲ್ಲಿ 1,048 ಸ್ವಯಂ ಕಾರ್ಯಕರ್ತರನ್ನ ಬಳಸಿಕೊಳ್ಳಲಾಗಿದ್ದು, ಅವರ ಮೇಲೆ ‘ಔಷಧಿ ಪ್ರಯೋಗ’ ನಡೆಸಲಾಗಿದೆ. ಇದರ ಸೂಕ್ತ ಫಲಿತಾಂಶದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?