Featured
ಹೇಗಿರಲಿದೆ ಗೊತ್ತಾ ಈ ಬಾರಿಯ ಐಪಿಎಲ್? ಕೊರೊನಾದಿಂದ ಬದಲಾಯ್ತುರೂಲ್ಸ್..!


ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವಾಳಿ ಕುರಿತು ಬಿಸಿಸಿಐ ಮಹತ್ವದ ಸಭೆ ನಡೆಸಿ ಮುಗಿಸಿದೆ. ಅಂದುಕೊಂಡಂತೆ ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಿ ನಿರ್ಣಯತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಐಪಿಎಲ್ ಯುನೈಟೆಟ್ ಅರಬ್ ಎಮಿರೇಟ್ಸ್‌ನಲ್ಲಿ ನೆರವೇರಲಿದೆ. ಇದಕ್ಕೆ ಕೇಂದ್ರ ಸರ್ಕಾರ ತನ್ನ ಗ್ರೀನ್ ಸಿಗ್ನಲ್ ನೀಡಿದೆ ಎಂದು ಬಿಸಿಸಿಐ ಹೇಳಿದೆ.
ಜೊತೆಗೆ, ಚೀನಾದ ಮೊಬೈಲ್ ಕಂಪನಿ ವಿವೋ ಸೇರಿದಂತೆ ತನ್ನ ಎಲ್ಲ ಪ್ರಾಯೋಜಕರನ್ನು ಉಳಿಸಿಕೊಳ್ಳಲು ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಡಳಿತ ಮಂಡಳಿ ನಿರ್ಧರಿಸಿದೆ. ಯುಎಇಯಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದ್ದರೂ, ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ ಪ್ರಾರಂಭವಾಗುವಂತೆ ಯೋಜಿಸಲಾಗಿದೆ.
ಈ ಪಂದ್ಯಗಳನ್ನು ಐಪಿಎಲ್ ನಿಯಮಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ನಡೆಸಲು ನಿರ್ಧರಿಸಿದೆ. ಇದಕ್ಕೂ ಮೊದಲು ರಾತ್ರಿ 8 ಗಂಟೆಗೆ ಈ ಪಂದ್ಯಗಳನ್ನು ಆಡಲಾಗುತ್ತಿತ್ತು. ಐಪಿಎಲ್ ಫೈನಲ್ ನವೆಂಬರ್ 10 ರಂದು ನಡೆಯಲಿದ್ದು, ಇದರಿಂದ ದೀಪಾವಳಿಯ ವಾರದ ಲಾಭ ಪ್ರಸಾರಕರಿಗೆ ಸಿಗಲಿದೆ. ಈ ಬಾರಿ ಐಪಿಎಲ್‌ನ 10 ಡಬಲ್ ಹೆಡರ್ ಅಂದ್ರೆ, ದಿನಕ್ಕೆ ಎರಡು ಪಂದ್ಯಗಳಂತೆ, ಕೇವಲ 10 ಪಂದ್ಯಗಳನ್ನ ಮಾತ್ರ ಆಡಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಆಗಸ್ಟ್ 26 ರಂದು ಫ್ರಾಂಚೈಸಿಗಳು ಯುಎಇ ತಲುಪಲಿದ್ದಾರೆ. ಪಂದ್ಯಗಳನ್ನು ವೀಕ್ಷಿಸಲು ನಿಯಮಿತ ಜನರಿಗಷ್ಟೇ ಅವಕಾಶ ಮಾಡಿಕೊಡಲಾಗಿದ್ದು ಯುಎಇ ಸರ್ಕಾರದಿಂದ ಅನುಮತಿ ಪಡೆದವರಿಗಷ್ಟೇ ಅವಕಾಶವಿರಲಿದೆ ಎಂದಿದ್ದಾರೆ.
ಅಕಸ್ಮಾತ್ ಪಂದ್ಯದ ವೇಳೆ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಅಸ್ತು ಎಂದಿದೆ. ತಂಡವೊಂದರ ಆಟಗಾರರ ಸಂಖ್ಯೆಯನ್ನು 24ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಆಟಗಾರರೆಲ್ಲ ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಆ. 26ರ ಒಳಗೆ ಯುಎಇ ತಲುಪಬೇಕಿದೆ.
ಪಂದ್ಯಗಳಿಗೆ ವೀಕ್ಷಕರಿಗೆ ಅವಕಾಶ ಕಲ್ಪಿಸುವುದು ಯುಎಇ ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಚಾರವಾದರೂ, ಟೂರ್ನಿಯ ಆರಂಭದಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಮುಂದುವರಿಸುವ ಸಾಧ್ಯತೆಯಿದ್ದು, ಒಂದು ಹಂತದ ಬಳಿಕ ಸೀಮಿತ ವೀಕ್ಷಕರಿಗೆ ಅವಕಾಶವನ್ನು ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್-ಮೇ ತಿಂಗಳಲ್ಲಿ ನಡೆಯಬೇಕಾಗಿತ್ತು. ಆದರೆ, ಕೊರೋನಾ ವೈರಸ್ ಭೀತಿಯಿಂದಾಗಿ ಇದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಕೋವಿಡ್ 19 ಭೀತಿಯ ಮಧ್ಯೆಯೇ ಸೂಕ್ತ ವೈಜ್ಞಾನಿಕ ಕ್ರಮಗಳೊಂದಿಗೆ ನಡೆಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















