Featured
ಭಾರತ-ಚೀನಾ ಗಡಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್, ಲಡಾಕ್ನಲ್ಲಿ ತ್ವರಿತ ಮತ್ತು ಸಂಪೂರ್ಣ ಸೈನ್ಯ ವಿಸರ್ಜನೆಗೆ ಎರಡೂ ದೇಶಗಳ ಒಪ್ಪಿಗೆ

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಪೂರ್ವ ಲಡಾಕ್ ಮತ್ತು ಗಲ್ವಾನ್ ಪ್ರದೇಶಗಳಿಂದ ಸೈನ್ಯವನ್ನು “ತ್ವರಿತ ಮತ್ತು ಸಂಪೂರ್ಣ” ವಿಸರ್ಜನೆಗೆ ಭಾರತ ಮತ್ತು ಚೀನಾ ಶುಕ್ರವಾರ ಒಪ್ಪಿಗೆ ನೀಡಿವೆ. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವಾಗಿದೆ ಎಂದು ಎರಡೂ ದೇಶಗಳು ಪುನರುಚ್ಛರಿಸಿವೆ.
ಗಡಿ ವ್ಯವಹಾರಗಳ ಕುರಿತು ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ (WMCC) ಚೌಕಟ್ಟಿನಡಿಯಲ್ಲಿ ಹೊಸ ಮಾತುಕತೆ ನಡೆದಿತ್ತು. ಈ ವೇಳೆ ಚೀನಾ ಮತ್ತು ಭಾರತ WMCC ಕಡೆ ಗಮನ ನೀಡಿ ತಮ್ಮ ಒಪ್ಪಿಗೆ ಸೂಚಿಸಿವೆ.
Ministry of External affairs ಶುಕ್ರವಾರ ಮಾತುಕತೆಗೆ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ತಮ್ಮ ಹಿರಿಯ ಸೇನಾ ಕಮಾಂಡರ್‌ಗಳ ಮತ್ತೊಂದು ಸಭೆ ಶೀಘ್ರದಲ್ಲೇ ನಡೆಯಲಿದ್ದು, ಸಂಪೂರ್ಣ ನಿಷ್ಕ್ರಿಯತೆಯನ್ನು “ಶೀಘ್ರವಾಗಿ” ಖಚಿತಪಡಿಸಿಕೊಳ್ಳಲು ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ಜುಲೈ 5 ರಂದು ಸುಮಾರು ಎರಡು ಗಂಟೆಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದರು. ಇದರ ಫಲವೇ ಇದು ಎಂದು ಹೇಳಲಾಗುತ್ತಿದೆ.
“ದ್ವಿಪಕ್ಷೀಯ ಒಪ್ಪಂದ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (LAC)ಯಲ್ಲಿ ಸೈನಿಕರ ತ್ವರಿತ ಮತ್ತು ಸಂಪೂರ್ಣ ನಿಷ್ಕ್ರಿಯತೆ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳುವುದು, ಒಟ್ಟಾರೆ ಸುಗಮತೆಗೆ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವೆಂದು ಒಪ್ಪಿಕೊಂಡರು ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?