Featured
ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಕಥೆ ಏನು..? ಶಾಸಕರೂ ಅಲ್ಲ..! ಎಲೆಕ್ಷನ್ನೂ ಇಲ್ಲ..!
![](https://risingkannada.com/wp-content/uploads/2019/11/munirathna.jpg)
ರೈಸಿಂಗ್ ಕನ್ನಡ : ಸುಪ್ರೀಂ ತೀರ್ಪಿನಿಂದಾಗಿ 17 ಶಾಸಕರು ಅನರ್ಹರಾಗಿದ್ದಾರೆ. ಮತ್ತೆ ಶಾಸಕರು ಅಂತ ಅನ್ನಿಸಿಕೊಳ್ಳಬೇಕು ಅಂದ್ರೆ, ಎಲ್ಲರೂ ಚುನಾವಣೆಗೆ ನಿಲ್ಲಬೇಕು, ಗೆಲ್ಲಬೇಕು. ಈಗಾಗಲೇ ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಮಾತ್ರ ಎಲೆಕ್ಷನ್ ಘೋಷಣೆ ಮಾಡಿದ್ದು, ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ. ಆದ್ರೆ, ಉಳಿದ ಎರಡು ಕ್ಷೇತ್ರಗಳಾದ ಬೆಂಗಳೂರಿನ ಆರ್ಆರ್ ನಗರ ಹಾಗೂ ರಾಯಚೂರಿನ ಮಸ್ಕಿಗೆ ಚುನಾವಣೆ ಘೋಷಣೆಯಾಗಿಲ್ಲ.
![](https://risingkannada.com/wp-content/uploads/2019/11/pratap.jpg)
ಈಗ ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದಿರೋ ಹಿನ್ನೆಲೆಯಲ್ಲಿ ಆರ್ಆರ್ ನಗರದ ಅನರ್ಹ ಶಾಸಕ ಮುನಿರತ್ನ ಹಾಗೂ ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಕಥೆ ತ್ರಿಶಂಕು ಸ್ಥಿತಿಗೆ ಬಂದು ತಲುಪಿದೆ. ಇಬ್ಬರೂ ಈಗ ಶಾಸಕರಲ್ಲ. ಅನರ್ಹರು. ಸದ್ಯ ಎಲೆಕ್ಷನ್ ಘೋಷಣೆ ಕೂಡ ಆಗಿಲ್ಲ.
ಇವರ ಪ್ರಕರಣ ಹೈಕೋರ್ಟ್ನಲ್ಲಿ ಇರೋದ್ರಿಂದ, ಆ ಪ್ರಕರಣ ಏನಾಗುತ್ತೆ..? ಹೈಕೋರ್ಟ್ನಲ್ಲಿ ಇದ್ದ ಪ್ರಕರಣವೂ ಮುಗಿದು ಹೋಗುತ್ತಾ..? ಅಥವಾ ಚುನಾವಣಾ ಆಯೋಗ ಈ ಎರಡೂ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದ್ಮೇಲೆ ಇಬ್ಬರೂ ಸ್ಪರ್ಧೆ ಮಾಡಬಹುದಾ..? ಇಲ್ವೋ..? ಅನ್ನೋದರ ಬಗ್ಗೆ ಸ್ಪಷ್ಟನೆ ಇಲ್ಲ.
ಹೀಗಾಗಿ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಇಬ್ಬರೂ ಕೂಡ ತ್ರಿಶಂಕು ಸ್ಥಿತಿ ಎದುರಿಸಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?