Connect with us

Featured

ಜನಾನುರಾಗಿ ಸತೀಶ್​ ಬಂದಿವಡ್ಡರ್​- ಮುಧೋಳ ಜನ ಮೆಚ್ಚಿದ ಕಾಂಗ್ರೆಸ್​ ಲೀಡರ್​

ರೈಸಿಂಗ್​ ಕನ್ನಡ:

ಮಂಜುನಾಥ ತಳವಾರ, ಬಾಗಲಕೋಟೆ:

Advertisement

ಸತೀಶ್ ಬಂದಿವಡ್ಡರ್. ಯಾವುದೇ ಸಮಯ, ಯಾವುದೇ ಸಂದರ್ಭ ಆದರೂ ನೊಂದವರ ನೆರವಿಗೆ ಬರುವ ಸಮಾಜ ಸೇವಕ. ಬಾಗಲಕೋಟೆ ಜಿಲ್ಲೆಯ ಮುಧೋಳ ಜನರಿಗೆ ಸೇವೆಗೆ ಸದಾ ಮಿಡಿಯುವ ವ್ಯಕ್ತಿತ್ವ. ದೇಶದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಹಾಮಾರಿ ನಿಯಂತ್ರಣಕ್ಕೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆ ಸತತವಾಗಿ ಶ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ಕೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳು ಕೆಲಸ ಇಲ್ಲದೆ ಬದುಕು ಸಾಗಿಸುವುದಕ್ಕೂ ಪರದಾಟ ನಡೆಸಬೇಕಾಗಿದೆ. ಇಂತಹ ಕಠಿಣ ಸಂಧರ್ಭದಲ್ಲಿ ಕಷ್ಟದಲ್ಲಿರುವವರ ನೆರವಿಗೆ ಬರುತ್ತಿರುವವರು ಸಮಾಜ ಸೇವಕ ಸತೀಶ್ ಬಂದಿವಡ್ಡರ್. ತನ್ನ ಮಾನವೀಯ ಮೌಲ್ಯಗಳಿಂದ ಯುವ ನಾಯಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನನ್ನ ಜನರ ಸೇವೆ ನನ್ನ ಜವಾಬ್ದಾರಿ ಅಂತ ನೊಂದವರ ನೆರವಿಗೆ ಬಂದಿದ್ದಾರೆ.

ರೈತರು ಕೂಲಿ ಕಾರ್ಮಿಕರಿಗೆ ನೆರವು

ಕೊರೊನಾದಿಂದ ಏಕಾಏಕಿ ಇಡೀ ದೇಶವೇ ಸಂಪೂರ್ಣ ಸ್ತಬ್ಧವಾಗಿರುವಾಗ, ದುಡಿಯುವ ವರ್ಗದ ಜನರ ಬದುಕೇ ನಿಂತಲ್ಲಿ ನಿಲ್ಲುವಂತೆ ಆಗಿದೆ. ಕಾರ್ಮಿಕರಿಗೆ ಕೆಲಸ ಇಲ್ಲ, ಕೈಯಲ್ಲಿ ಹಣವೂ ಇಲ್ಲದೆ ಪರದಾಡುವಂತಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನ, ತರಕಾರಿಗಳನ್ನ, ಮಾರಾಟ ಮಾಡಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದದ್ದಾರೆ. ಇಂತಹ ರೈತರ ನೆರವಿಗೆ ನಿಂತಿರುವ ಸತೀಶ್ ಬಂದಿವಡ್ಡರ್ ಮುಧೋಳದಲ್ಲಿ ರೈತರು ಬೆಳೆದ ತರಕಾರಿಯನ್ನ ಖರೀದಿಸಿ ಬಡವರಿಗೆ ಉಚಿತವಾಗಿ ನೀಡಿದ್ದರು. ನೂರಾರು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಹಸಿದ ಹೊಟ್ಟೆಗೆ ಅನ್ನ ನೀಡಿ ಪುಣ್ಯ ಕಟ್ಟಿಕೊಂಡಿದ್ದಾರೆ.

ಮನೆ ಮನೆ ಮಾಸ್ಕ್ ವಿತರಣೆ

ಕೊರೊನಾದಿಂದ ಜನರು ಜಾಗೃತರಾಗಲು ಸತೀಶ್ ಬಂದಿವಡ್ಡರ್ ತಮ್ಮ ಸ್ವಂತ ಹಣದಲ್ಲಿ 1 ಲಕ್ಷ ಮಾಸ್ಕ್ ಗಳನ್ನ ನೀಡಿದ್ದಾರೆ. ಮುಧೋಳ ತಾಲೂಕಿನ ಹಳ್ಳಿ ಹಳ್ಳಿಗೆ ತೆರಳಿ ಮನೆ ಮನೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಕೊಟ್ಟಿದ್ದಾರೆ. ಈ ಮೂಲಕ ಜನರು ಕೊರೊನಾದಿಂದ ಪಾರಾಗಲು ಸುರಕ್ಷಿತ ಕ್ರಮಗಳನ್ನು ಮಾಡಿಕೊಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬರೋಬ್ಬರಿ 45 ದಿನಗಳ ಕಾಲ ವೈದ್ಯಕೀಯ ಸಿಬ್ಬಂಧಿ, ಪೊಲೀಸ್ ಸಿಬ್ಬಂಧಿ, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಕಂದಾಯ ಇಲಾಖೆ ಸೇರಿದಂತೆ ಕೊರೊನಾ ಕರ್ತವ್ಯ ನಿರತ ಎಲ್ಲ ಇಲಾಖೆ ನೌಕರರರಿಗೆ ನೀರಿನ ಬಾಟಲ್ ಆಹಾರದ ಪೊಟ್ಟಣಗಳನ್ನ ನೀಡಿದ್ದಾರೆ. ಜನರಿಗಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಇನ್ನು ಸತೀಶ್ ಬಂದಿವಡ್ಡರ್ ಕೇವಲ ಕೊರೊನಾ ಸಂದರ್ಭದಲ್ಲಿ ಮಾತ್ರ ಅಲ್ಲದ್ದೇ ಸದಾ ಕಾಲ ಜನರಿಗಾಗಿ ಒಂದಲ್ಲ ಒಂದು ಸಮಾಜಮುಖಿ ಕೆಲಸವನ್ನ ಮಾಡುತ್ತಲೇ ಇರುತ್ತಾರೆ. ಕಳೆದ ಮೂರು ವರ್ಷಗಳಿಂದ ದುಡಿಯುವ ವರ್ಗಗಳ ಜನರಿಗೆ ಅನುಕೂಲವಾಗುವಂತ ಹಿನ್ನೆಲೆಯಲ್ಲಿ ಜನಸ್ನೇಹಿ ಕ್ಯಾಂಟೀನ್ ಮಾಡಿದ್ದಾರೆ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡುತ್ತಿದ್ದಾರೆ.

ನಿರುದ್ಯೋಗಿ ಯುವಕರಿಗೆ ಬೆನ್ನೆಲುಬಾಗಿ ನಿಂತ ಬಂದಿವಡ್ಡರ್

ಇನ್ನು SDA, FDA, KAS ಸೇರಿದಂತೆ ಸರ್ಕಾರಿ ನೌಕರರಿಗಾಗಿ ಪ್ರಯತ್ನಿಸುವ ವಿದ್ಯಾವಂತರಿಗೆ ಉಚಿತವಾಗಿ ಕೋಚಿಂಗ್ ಕ್ಲಾಸ್ ಗಳನ್ನ ನಡೆಸುತ್ತಾರೆ. ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಮೊಬೈಲ್ ರಿಪೇರಿ, ತರಬೇತಿ, ಮೋಟಾರ್ ರಿಪೇರಿ ತರಬೇತಿ, ಸೇರಿದಂತೆ ಹಲವು ತರಬೇತಿಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಹೀಗೆ ಸದಾ ಕಾಲ ಜನ ಸೇವೆಯನ್ನು ತನ್ನ ಜವಾಬ್ದಾರಿ ಅಂತ ಅಂದುಕೊಂಡು ಜನರ ನೆರವಿಗೆ ಬರುವ ಸತೀಶ್ ಬಂದಿವಡ್ಡರ್ ಮೂಲತಃ ಬಡ ಕುಟುಂಬದಲ್ಲಿ ಬೆಳೆದವರು. ಶಿಕ್ಷಣ ಮುಗಿಸಿದ ಬಳಿಕ ಉದ್ಯಮಿಯಾದ ಬಂದಿವಡ್ಡರ್ ಕಳೆದ 30 ವರ್ಷಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ವಿರುದ್ಧ ಸ್ಪರ್ಧಿಸಿ ಕೇವಲ 15 ಸಾವಿರ ಮತಗಳ ಅಂತದಲ್ಲಿ ಪರಾಜಿತಗೊಂಡಿದ್ದರು.

ಅದು ಏನೇ ಇರಲಿ ತಮ್ಮ ಜನಸೇವೆಯ ಕಾರ್ಯವನ್ನು ಕೇವಲ ಚುನಾವಣೆ ಪ್ರಚಾರಕ್ಕೆ ಸೀಮಿತವಾಗಿಸುವ ಜನರ ಮದ್ಯೆ, ಸದಾ ಕಾಲ ಜನರ ಬಗ್ಗೆ ಚಿಂತಿಸುವ, ಜನಸೇವೆಯಲ್ಲಿ ತೊಡಗುವ ವಿಶೇಷ ವ್ಯಕ್ತಿ ಸತೀಶ್ ಬಂದಿವಡ್ಡರ್ .

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ